ಸನ್ಮಾರ್ಗ ವಾರ್ತೆ
ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (HIF ಇಂಡಿಯಾ) ಇದರ ವಾರ್ಷಿಕ ಮಹಾಸಭೆ (AGM) ಇಂದು ಸಂಸ್ಥೆಯ ಪ್ರದಾನ ಕಚೇರಿಯಲ್ಲಿ ನಡೆಯಿತು. ಈ ಮೂಲಕ ನಿರ್ಗಮಿತ ಅಧ್ಯಕ್ಷರಾದ ಆದಿಲ್ ಪರ್ವೇಜ್ ಅವರ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕಾರ್ಯಕ್ರಮದಲ್ಲಿ ಜನಾಬ್ ಮೊಹಮ್ಮದ್ ಕುಂಞಿ ಅವರು ಮುಖ್ಯ ಅತಿಥಿ/ಅತಿಥಿ ಭಾಷಣಕಾರರಾಗಿ ಭಾಗವಹಿಸಿದ್ದರು. HIF ಕತಾರ್ ವಿಂಗ್ನ ಮಾಜಿ ಅಧ್ಯಕ್ಷರಾದ ಬ್ರ. ಶುಹೈಬ್ ಅವರು ಸಹ ಉಪಸ್ಥಿತರಿದ್ದರು.
ಆದಿಲ್ ಪರ್ವೇಜ್ ಅವರು ಮೂರು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ ಸಂದರ್ಭದಲ್ಲಿ ನೀಡಿದ ನಾಯಕತ್ವ ಮತ್ತು ಕೊಡುಗೆಗಳನ್ನು ಸದಸ್ಯರು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು.
ಮತದಾನ ಪ್ರಕ್ರಿಯೆಯ ಬಳಿಕ ರಿಜ್ವಾನ್ ಪಾಂಡೇಶ್ವರ್ ಅವರನ್ನು ಮುಂದಿನ 3 ವರ್ಷಗಳ ಕಲಾ ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ನೂತನ ಅಧ್ಯಕ್ಷರಾಗಿ ಹಾಗೂ ಶ್ರೀ ಬಿಲಾಲ್ ರೈಫ್ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ನೂತನ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಸದಸ್ಯರು, ಅವರ ಯಶಸ್ವಿ ಅವಧಿಗೆ ಶುಭ ಹಾರೈಸಿದರು.
ಸಂಸ್ಥೆಯ ಬಲವರ್ಧನೆ ಹಾಗೂ ಸಮುದಾಯಮುಖಿ ಚಟುವಟಿಕೆಗಳನ್ನು ಮುಂದುವರಿಸಲು ಏಕತೆ, ಸಹಕಾರ ಮತ್ತು ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಸಭೆಯಲ್ಲಿ ಒತ್ತಿಹೇಳಲಾಯಿತು.
ನೂತನ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸದಸ್ಯರು ಭರವಸೆ ನೀಡುವುದರೊಂದಿಗೆ, ಹೊಸ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅನ್ನು ಮತ್ತಷ್ಟು ಮುನ್ನಡೆಸುವ ಸಂಕಲ್ಪದೊಂದಿಗೆ AGM ಮುಕ್ತಾಯಗೊಂಡಿತು.












