ಸನ್ಮಾರ್ಗ ವಾರ್ತೆ
ಚಳ್ಳಕೆರೆ: 14ನೇ ಶತಮಾನ ಅರೇಬಿಯಾದ ಸಮಾಜದಲ್ಲಿ ತುಂಬಿದ್ದ ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳು ಭಾವನೆಯನ್ನು ಹೋಗಲಾಡಿಸಿ, ಮೌಡ್ಯ, ಶೋಷಣೆ, ಅಜ್ಞಾನ, ಅನ್ಯಾಯದ ವಿರುದ್ಧ ಹೋರಾಟ ನಡೆಸಿದವರು ಪ್ರವಾದಿ ಮಹಮ್ಮದರು ಎಂದು ಜಮಾಅತೆ ಇಸ್ಲಾಮೀ ಹಿಂದ್ ತಾಲೂಕು ಅಧ್ಯಕ್ಷ ಮುಹಮ್ಮದ್ ರಫೀಕ್ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮಹಮ್ಮದ್ರ ಜನನ ತಿಂಗಳ ಅಂಗವಾಗಿ ಆ.26ರಿಂದ ಸೆ.6ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ “ಕ್ರಾಂತಿಯ ಜ್ಯೋತಿ, ಪ್ರವಾದಿ ಮುಹಮದ್(ಸ) ಎಂಬ ಸೀರತ್ ಅಭಿಯಾನ ಆಯೋಜಿಸಲಾಗಿದೆ ಎಂದು ಹೇಳಿದರು. ಈ ಅಭಿಯಾನದಲ್ಲಿ ಪ್ರವಾದಿ ಮಹಮ್ಮದ್ ಅವರ ನೈತಿಕ ಸಂದೇಶ ತಲುಪಿಸುವುದರ ಜತೆಗೆ ಅವುಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು. ಸಮಾನತೆ ಮತ್ತು ಶಾಂತಿಯ ಮಹತ್ವವನ್ನು ಸಾರುವುದಾಗಿ ಉದ್ದೇಶಿಸಲಾಗಿದೆ ಎಂದರು. ಪ್ರತಿ ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ತಿಳಿಸಿದರು.
ಎಲ್ಐಸಿ ತಿಪ್ಪೇಸ್ವಾಮಿ ಮಾತನಾಡಿ, ಸಮಾನತೆ ಸಂದೇಶ ನೀಡುವ ಉದ್ದೇಶದಿಂದ ಮುಹಮ್ಮದ್ ರವರು ಪ್ರವಾದಿಯಾಗಿ ರೂಪುಗೊಂಡರು. ಸಮಾಜದಲ್ಲಿ ಅಶಾಂತಿ, ಸಮಾನತೆ ದೂರ ಮಾಡಲು ಅವರ ಪರಿಶ್ರಮ ಹೆಜ್ಜೆ ಮಾದರಿಯೋಗ್ಯ ಎಂದು ಅಭಿಪ್ರಾಯಪಟ್ಟರು. ಅಭಿಯಾನದ ಪ್ರಯುಕ್ತ ಸಾಹಿತಿ ಯೋಗೇಶ್ ಮಾಸ್ಟರ್ ಬರೆದ “ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್(ಸ)” ಹಾಗೂ ಅಬ್ದುಸ್ಸಲಾಮ್ ಪುತ್ತಿಗೆಯವರು ಬರೆದ “ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ಮುಹಮ್ಮದ್ (ಸ)” ಎಂಬ ಎರಡು ಕೃತಿಗಳನ್ನು ಬಿಡುಗಡೆ ಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರಾದ ಎಸ್.ಕೆ. ಸೈಯ್ಯದ್ ಅಲಿ, ರಹೀಂನಗರ ಮಸೀದಿ ಕಾರ್ಯದರ್ಶಿ ಸಾದೀಕ್, ಜಮೀಲ್, ಎಂ.ಎನ್. ಮೃತ್ಯುಂಜಯ, ರಮೇಶ್, ಯಾಸೀನ್, ಸಂತೋಷ ಕುಮಾರ್, ಮುತ್ತುರಾಜ್, ಸೈಯ್ಯದ್ ಅಹಮದ್, ಸೈಯ್ಯದ್ ಅಬ್ದುಲ್, ಸೈಯ್ಯದ್ ಇಮ್ರಾನ್ ಮುಂತಾದವರು ಹಾಜರಿದ್ದರು.












