ಟುನಿಷ್ಯನ್ ಪಾರ್ಲಿಮೆಂಟಿಗೆ ರಾಶಿದುಲ್ ಗನೂಶಿ ಸ್ಪರ್ಧೆ: ದೇಶದ ಅಧ್ಯಕ್ಷರಾಗುವ ಸಾಧ್ಯತೆ

0
571

ಟುನಿಷ್, ಜು. 23: ಟುನಿಷ್ಯದಲ್ಲಿ ಹೆಚ್ಚು ಪ್ರಭಾವ ಇರುವ ಅನ್ನಹ್ದ ಪಾರ್ಟಿಯ ನಾಯಕ ರಾಶಿದುಲ್ ಗನೂಷಿ ಮುಂಬರುವ ಪಾರ್ಲಿಮೆಂಟು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅಕ್ಟೋಬರ್ ನಲ್ಲಿ ಅಲ್ಲಿ ಚುನಾವಣೆ ನಡೆಯಲಿದ್ದು ದೇಶದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹೊರಟಿದ್ದಾರೆ. 2011ರಲ್ಲಿ ಟುನಿಷ್ಯದಲ್ಲಿ ನಡೆದ ಕ್ರಾಂತಿಯ ಮೂಲಕ ಸರ್ವಾಧಿಕಾರಿ ಝೈನುಲ್ ಆಬಿದೀನ್ ಬಿನ್ ಅಲಿಯವರನ್ನು ಸ್ಥಾನಭ್ರಷ್ಟಗೊಳಿಸಲಾಗಿತ್ತು. ಇದರಲ್ಲಿ ಎಪ್ಪತ್ತೆಂಟು ವರ್ಷದ ರಾಷಿದ್ ಅಲ್ ಗನೂಷಿ ಮತ್ತು ಅನ್ನಹ್ದ ಪಾರ್ಟಿ ಸಕ್ರಿಯವಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಗನೂಶಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ದೇಶದ ಆಡಳಿತ ಪಾರ್ಟಿ ನಿದ ಟುನಿಸ್ ಪಾರ್ಟಿಯ ಬೆಜಿ ಕೆಯ್ಡ್ ಈಗ ಟುನಿಷ್ಯದ ಅಧ್ಯಕ್ಷರಾಗಿದ್ದಾರೆ. ದೇಶದ ಜಾತ್ಯತೀತತೆ ಮತ್ತು ಇಸ್ಲಾಮಿ ಗುಣವನ್ನು ಸಮನ್ವಯಿಸಿಕೊಂಡು ಮುಂದೆ ಹೋಗಲು ಗನೂಶಿಗೆ ಸಾಧ್ಯವಿದೆ ಎನ್ನುವ ಮಾತು ಸಾಮಾನ್ಯವಾಗಿ ಟುನೇಷ್ಯದಲ್ಲಿ ಪ್ರಚಲಿತದಲ್ಲಿದೆ. ಗನೂಷಿ ಪ್ರಧಾನಿಯೊ, ಸ್ಪೀಕರೋ ಆಗುವ ಸಾಧ್ಯತೆಯಿದೆ.

ಕ್ರಾಂತಿಯ ಬಳಿಕ ಮೊದಲ ಬಾರಿ ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾವಯಿತವಾದ ಸರಕಾರ ಈಗ ಟುನಿಷ್ಯದಲ್ಲಿ ಅಸ್ತಿತ್ವದಲ್ಲಿದೆ. ದೇಶದ ಪ್ರಧಾನ ಪ್ರತಿಪಕ್ಷ ಅನ್ನಹ್ದ ಪಾರ್ಟಿಯಾಗಿದೆ.