ಪ್ರಾಚೀನ ಅರಬರು ಖರ್ಜೂರವನ್ನು ತಾಜಾ ಇಟ್ಟುಕೊಳ್ಳುತ್ತಿದ್ದು ಹೇಗೆ? ಇಲ್ಲಿದೆ ವಿಧಾನ

0
246

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾದ ಖಾಸಿಂ ನಿವಾಸಿಗಳು ಜುಬಾ ಮತ್ತು ಜೀಸ ಎಂಬ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿ ಉತ್ಪನ್ನಗಳನ್ನು ಸಂರಕ್ಷಿಸುತ್ತಾರೆ. ಈ ವಿಧಾನದಲ್ಲಿ ಮೂರು ವರ್ಷಗಳವರೆಗೆ ಉತ್ಪನ್ನಗಳು ತಾಜಾ ಆಗಿ ಇರುತ್ತವೆ. ಹಿಂದಿನ ಕಾಲದಲ್ಲಿ ರೆಫ್ರಿಜರೇಟರ್ ಅಥವಾ ಆಧುನಿಕ ತಂಪಾಗಿಸುವ ವ್ಯವಸ್ಥೆಗಳು ಇರಲಿಲ್ಲ ಆ ಸಮಯದಲ್ಲಿ ಖರ್ಜೂರ ಮುಖ್ಯ ಆಹಾರ ಮತ್ತು ಆರ್ಥಿಕ ಆಧಾರವಾಗಿದ್ದರಿಂದ ಸುಗ್ಗಿಯ ಕಾಲದ ನಂತರ ವರ್ಷವಿಡೀ ಅವುಗಳನ್ನು ಸಂರಕ್ಷಿಸುವ ಮೂಲಕ ಕುಟುಂಬಗಳು ತಮ್ಮ ಜೀವನೋಪಾಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿತ್ತು.

ಜಿಸ್ಸಾವನ್ನು ಸ್ಥಳೀಯವಾಗಿ ಲಭ್ಯ ಇರುವ ಜೇಡಿ ಮಣ್ಣು ಮತ್ತು ಸಣ್ಣ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಇವುಗಳ ನಡುವಿನ ಬಿರುಕುಗಳನ್ನು ಮುಚ್ಚಲು ಮತ್ತು ಖರ್ಜೂರವನ್ನು ರಕ್ಷಿಸಲು ಅದರ ಒಳಭಾಗವನ್ನು ಸುಣ್ಣದ ಲೇಪನದಿಂದ ಮುಚ್ಚಲಾಗುತ್ತಿತ್ತು.

ಖಾಸಿಂ ನ ಅನೇಕ ಮನೆಗಳಲ್ಲಿ ಹಿಂದೆ ಇದ್ದ ಈ ವ್ಯವಸ್ಥೆಗಳು ಮಾರುಕಟ್ಟೆಯಿಂದ ಪದೇಪದೇ ಖರೀದಿಸುವ ಆರ್ಥಿಕ ಬಾಧ್ಯತೆಯನ್ನು ತಪ್ಪಿಸಿದವು . ಸದಾ ಖರ್ಜೂರ ಮನೆಯಲ್ಲಿ ಇರುತ್ತಿತ್ತು ಮತ್ತು ತಾಜಾ ಇರುತ್ತಾ ಇತ್ತು. ರಿಯಾದ್ ನ ಅಲ್ ಕುಬ್ರ ಗವರ್ನರ್ ರೇಟ್ ನಲ್ಲಿರುವ ಹಳೆಯ ಮನೆಯಲ್ಲಿ ಈಗಲೂ ಸಂರಕ್ಷಿಸಲಾಗಿರುವ ಸುಬಾ ಇದೆ. ಪ್ರಾಚೀನ ಕಾಲದ ಜನರು ಬಳಸ್ತಾ ಇದ್ದ ವಾಸ್ತುಶಿಲ್ಪ ಮತ್ತು ಪ್ರಾಯೋಗಿಕ ಆಹಾರ ಸಂರಕ್ಷಣ ವಿಧಾನಗಳು ಇವೆ.