ಸನ್ಮಾರ್ಗ ವಾರ್ತೆ
ಆರ್ಎಸ್ಎಸ್ ವಿರುದ್ಧ ನಿರ್ಬಂಧಗಳನ್ನು ಹೇರಬೇಕು ಎಂದು ಒತ್ತಾಯಿಸಿದ ಕೆಲವು ದಿನಗಳ ನಂತರ ಅಮೆರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಮುಖ್ಯಸ್ಥ ಡಾಕ್ಟರ್ ಆಸಿಫ್ ಮೊಹಮ್ಮದ್ ನಿಲುವು ಬದಲಿಸಿದ್ದಾರೆ. ಮೋಹನ್ ಭಾಗವತ್ ಜೊತೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಮತ್ತು ಪರಿಸ್ಥಿತಿ ಸೂಕ್ತವಾಗಿದ್ದರೆ ಭೇಟಿಯಾಗುತ್ತೇವೆ ಎಂದು ಹೇಳಿದ್ದಾರೆ. ಮೋಹನ್ ಭಾಗವತ್ ಗೆ ವೀಸಾ ನಿರಾಕರಿಸಬೇಕು ಮತ್ತು ಸಂಘಟನೆಯ ಮೇಲೆ ನಿರ್ಬಂಧ ಹೇರಬೇಕು ಎಂದು ಅಮೆರಿಕ ಸರ್ಕಾರ ಒತ್ತಾಯಿಸಿದ ಕೆಲವು ದಿನಗಳ ನಂತರ ಈ ಹೊಸ ನಿಲುವು ಬಂದಿದೆ.
ಮೋಹನ್ ಭಾಗವತ್ ಅವರ ಕಾರ್ಯಕ್ರಮದ ವಿರುದ್ಧ ಈ ಸಂಘಟನೆ ಧ್ವನಿಯೆತ್ತಿತ್ತು. ಆದರೆ ಇದೀಗ ತನ್ನ ನಿಲುವನ್ನು ಮೃದುಗೊಳಿಸಿದೆ.
ಮಾತುಕತೆಯ ಮೂಲಕ ವಿಷಯವನ್ನು ಮನವರಿಕೆ ಮಾಡಿಕೊಡಲು ನಾವು ಸಿದ್ಧರಿದ್ದೇವೆ . ನಾವು ಮಾತುಕತೆಗೆ ಎಂದಿಗೂ ಇಲ್ಲ ಎನ್ನುತ್ತಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ನಾವು ಅವರೊಂದಿಗೆ ಮಾತನಾಡಲು ಸಿದ್ದರಿದ್ದೇವೆ. ನಾವು ಅವರ ಮಾತನ್ನು ಕೇಳಲು ಮತ್ತು ನಮ್ಮ ನಿಲುವನ್ನು ಬದಲಾಯಿಸಲು ಸಿದ್ಧರಿದ್ದೇವೆ ಎಂದು ಡಾ. ಆಸಿಫ್ ಮೊಹಮ್ಮದ್ ಹೇಳಿದ್ದಾರೆ.












