‘ಕೇಸರಿ ಗೂಂಡಾಗಿರಿ’ ಶೀರ್ಷಿಕೆ: ಆನಂದಬಜಾರ್ ಪತ್ರಿಕೆಯ ವಿರುದ್ಧ ಪ್ರಕರಣ ದಾಖಲು

0
139

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಾಧವಪುರ್ ವಿಶ್ವವಿದ್ಯಾಲಯದ ಮೇಲೆ ಹಿಂದುತ್ವ ಸಂಘಟನೆಗಳ ದಾಳಿಯ ಕುರಿತ ಸುದ್ದಿ ವರದಿಗೆ ‘ಕೇಸರಿ ಗೂಂಡಾಗಿರಿ’ ಎಂದು ಶೀರ್ಷಿಕೆ ನೀಡಿದ್ದಕ್ಕಾಗಿ ಪ್ರಮುಖ ಬಂಗಾಳಿ ಪತ್ರಿಕೆ ಆನಂದಬಜಾರ್ ಪತ್ರಿಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಜಯ್ ಶಾಸ್ತ್ರಿ ಮಹಾರಾಜ್ ಎಂಬ ಹಿಂದೂ ವ್ಯಕ್ತಿಯೊಬ್ಬರು ಕೋಲ್ಕತ್ತಾ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ.

‘ಕೇಸರಿ’ ಎಂಬುದು ರಾಜಕೀಯ ಸಂಕೇತವಲ್ಲ, ಧಾರ್ಮಿಕ ಸಂಕೇತವಾಗಿದೆ ಮತ್ತು ಈ ಅಭಿವ್ಯಕ್ತಿಯು ಲಕ್ಷಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದು ದೂರಿನಲ್ಲಿದೆ. ಆನಂದಬಜಾರ್ ಪತ್ರಿಕೆಯ ಸಂಪಾದಕಿ ಇಷಾನಿ ದತ್ತಾ ರಾಯ್ ಸೇರಿದಂತೆ ಇಬ್ಬರು ಹಿರಿಯ ಪತ್ರಕರ್ತರು ಮತ್ತು ಸಂಪಾದಕೀಯ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸುದ್ದಿಯ ಕುರಿತು ದಾಖಲಾಗಿರುವ ಈ ಪ್ರಕರಣವು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯ ಎಂದು ಆರೋಪಿಸಿರುವ ಪ್ರೆಸ್ ಕ್ಲಬ್‌ಗಳ ಒಕ್ಕೂಟವು, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.