ಕತ್ತಲಿನಿಂದ ಬೆಳಕಿನೆಡೆಗೆ ಆಗಿತ್ತು ಪ್ರವಾದಿಯ ಸಂದೇಶ: ರೇಷ್ಮಾ ಬೈಲೂರು

0
273

ಸನ್ಮಾರ್ಗ ವಾರ್ತೆ

ಕಾಪು: ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿ ಸಹೋದರ ಸಂಬಂಧವನ್ನು ಬೆಸೆಯುವಂತಹ ಕ್ರಾಂತಿಯ ಜ್ಯೋತಿಯನ್ನು ಪ್ರವಾದಿ ಮುಹಮ್ಮದ್(ಸ) ಸಾವಿರದ ನಾಲ್ಕು ನೂರು ವರ್ಷಗಳ ಮೊದಲು ಬೆಳಗಿಸಿದ್ದು ಅದು ಇಂದಿಗೂ ನಂದದೆ ಬೆಳಗುತ್ತಾ ಇದೆ.

ಅಂಧಕಾರದಲ್ಲಿ ಮುಳುಗಿದ್ದ ಒಂದುಸಾಮ್ರಾಜ್ಯವನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಕೆಲಸ ಮಾಡಿ ಕ್ರಾಂತಿಯ ಜ್ಯೋತಿ ಬೆಳಗಿಸಿದ ದೇಶ ಇಂದು ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿಯಾಗಿದೆ.

ಮುಸ್ಲಿಮರಿಗೆ ಮಾದರಿಯಾಗಿದ್ದ ಪ್ರವಾದಿ ಮುಹಮ್ಮದ್(ಸ)ರವರು ಬೆಳಗಿಸಿದ ಕ್ರಾಂತಿಯ ಜ್ಯೋತಿಯನ್ನು ಅವರ ಸಮುದಾಯದವರಾದ ನಾವುಗಳು ಕೂಡಾ ಆ ಜ್ಯೋತಿಯು ನಂದದ ಹಾಗೆ ಸಮಾಜದಲ್ಲಿ ಇರುವ ಕೆಡುಕುಗಳನ್ನು ಅಳಿಸುತ್ತಾ ಒಳಿತಿನ್ನು ಸ್ಥಾಪಿಸುವ ಮೂಲಕ ಮಾಡಬಹುದಾಗಿದೆ.

ಕುರ್‌ಆನ್‌ನ ಬೋಧನೆಗಳ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ದಾರಿ ತೋರಿಸುವ ಕೆಲಸವನ್ನು ಪ್ರವಾದಿ ಮುಹಮ್ಮದ್(ಸ)ರವರ ಅನುಸರಣೆಯ ಮೂಲಕ ಮಾಡಬೇಕಾದುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯ ಆಗಿದೆ ಎಂದು ಜಮಾ ಆತೆ ಇಸ್ಲಾಮಿ ಹಿಂದ್ ನ ಸದಸ್ಯೆ, ರೇಷ್ಮಾ ಬೈಲೂರುರವರು ಹೇಳಿದರು.

ಅವರು ಕಾಪುವಿನ ಕಮ್ಮ್ಯೂನಿಟಿ ಹಾಲ್‌ನಲ್ಲಿ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)ರವರ ಅಭಿಯಾನದ ಅಂಗವಾಗಿ ಮಹಿಳೆಯರಿಗಾಗಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇನ್ನೊರ್ವ ಮುಖ್ಯ ಅತಿಥಿ ಯುನಾನಿ ವೈದ್ಯರು ಆದ ಡಾಕ್ಟರ್ ಅಂಜುಮ್ ರುಕ್ಸಾರ್ ರವರು, ಪ್ರವಾದಿತ್ವದ ದೌತ್ಯವನ್ನು ಪೂರೈಸುವ ನಿಟ್ಟಿನಲ್ಲಿ, ಪ್ರವಾದಿ ಮುಹಮ್ಮದ್(ಸ )ರವರು ಜೀವನದ ಎಲ್ಲಾ ರಂಗಗಳಲ್ಲಿಯೂ ಅಲ್ಲಾಹನ ವಿಧೇಯ ದಾಸನಾಗಿ ಜೀವಿಸುತ್ತಾ, ಆತನ ಆಜ್ಞೆಯನ್ನು ಪಾಲಿಸುತ್ತಾ, ಸಾಮಾಜಿಕ ನ್ಯಾಯ ಪಾಲನೆಯಲ್ಲಿ ನನ್ನ ಮಗಳು ತಪ್ಪು ಎಸಗಿದ್ದರೂ ಆಕೆಯನ್ನು ಶಿಕ್ಷಿಸದೆ ಬಿಡಲಾರೆ ಎಂದ್ದಿದ್ದರು.
ಕೌಟುಂಬಿಕ ಜೀವನದಲ್ಲಿ, ಮನೆ ಕೆಲಸದಲ್ಲಿ ಕೈ ಜೋಡಿಸುತಿದ್ದರು.

ಅಲ್ಲಾಹನ ಪ್ರತಿಯೊಬ್ಬ ದಾಸನು ಪರಲೋಕ ಜೀವನದಲ್ಲಿ ನರಕದಿಂದ ಪಾರಾಗಿ ಮೋಕ್ಷವನ್ನು ಪಡೆಯಬೇಕೆಂಬ ಕಾಳಜಿ ಪ್ರವಾದಿಗೆ ಇತ್ತು. ಅದಕ್ಕಾಗಿ ಆತನ ದಾಸನು ಇಹಲೋಕದಲ್ಲಿ ಅಲ್ಲಾಹನ ಆಜ್ಞೆಯಂತೆ ಮತ್ತು ಪ್ರವಾದಿ ಮುಹಮ್ಮದ್(ಸ )ರವರ ಮಾರ್ಗದರ್ಶನದಂತೆ ಜೀವಿಸಬೇಕೆಂಬ ಕರೆ ನೀಡುತಿದ್ದರು ಎಂದು ಹೇಳಿದರು.

ಈ ಮಧ್ಯೆ ಗ್ರಂಥಕರ್ತ ಸಾಹಿತಿ ಯೋಗೇಶ್ ಮಾಸ್ಟರ್ ಬರೆದ “ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್(ಸ) ”ಹಾಗೂ ಅಬ್ದುಲ್ ಸಲಾಂ ಪುತ್ತಿಗೆಯವರು ಬರೆದ “ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ) ಎಂಬ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.

ಕಾರ್ಯಕ್ರಮವು ಆಯಿಷಾ ಶೈಮಾರವರ ಕುರ್‌ಆನ್‌ ಪಠಣದೊಂದಿಗೆ ಪ್ರಾರಂಭವಾಯಿತು.
ಕಾಪು ಶಾಖೆಯ ಮಹಿಳಾ ಸಂಚಾಲಕಿ ಶೇಹೆನಾಝ್‌ರವರು ಸ್ವಾಗತ ಮತ್ತು ಪ್ರಸ್ತಾವಿಕ ಭಾಷಣ ಮಾಡಿದರು.
ಬೀಬಿ ಬತುಲ್‌ರವರು ಧನ್ಯವಾದ ನೀಡಿದರು. ಮಸ್ನಾ ಮುಳೂರುರವರು ಕಾರ್ಯಕ್ರಮ ನಿರೂಪಿಸಿದರು.