ಕೆನಡಾ | ಗೋಮಾಂಸ ಬೇಯಿಸಿದ ವಿಚಾರವಾಗಿ ಬಾಡಿಗೆದಾರನ ಜತೆ ಗಲಾಟೆ: ಭಾರತೀಯ ಮೂಲದ ಮನೆಮಾಲಕಿ ಬಂಧನ

0
960

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕೆನಡಾದಲ್ಲಿ ಭಾರತೀಯ ಮೂಲದ ಮನೆಮಾಲಕಿಯೊಬ್ಬರು ತಮ್ಮ ಬಾಡಿಗೆದಾರನ ಜತೆ ಜಗಳವಾಡಿದ ಬಳಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಬಾರ್‌ಬಿಕ್ಯೂನಲ್ಲಿ ಬೇಯಿಸಿದ ಗೋಮಾಂಸವನ್ನು ತೆಗೆದುಹಾಕಲು ಯತ್ನಿಸಿದ್ದಾರೆ ಹಾಗೂ ಕೋಪದಿಂದ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಬಾಡಿಗೆದಾರನ ಫೋನ್‌ನಲ್ಲಿ ಸೆರೆಹಿಡಿಯಲಾದ ವೀಡಿಯೊ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ.

ಆ ವ್ಯಕ್ತಿಯು ಗ್ರಿಲ್‌ನಲ್ಲಿ ಗೋಮಾಂಸವನ್ನು ಬೇಯಿಸಿದಾಗ ಸಮಸ್ಯೆಗಳು ಪ್ರಾರಂಭವಾದವು. ವಾಗ್ವಾದವು ವಿಕೋಪಕ್ಕೆ ಹೋದ ನಂತರ, ಮನೆಮಾಲಕಿ ಗ್ರಿಲ್‌ನಲ್ಲಿ ಅಡುಗೆ ಮಾಡಿದ್ದ ಎಲ್ಲಾ ಆಹಾರವನ್ನು ಮರದ ತುಂಡಿನಿಂದ ಹಾನಿಗೊಳಿಸಿದರು ಮತ್ತು ಭವಿಷ್ಯದಲ್ಲಿ ತನ್ನ ಅನುಮತಿಯಿಲ್ಲದೆ ಗೋಮಾಂಸವನ್ನು ಬೇಯಿಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು ಹಾಗೂ ಮತ್ತೊಮ್ಮೆ ಹೀಗೆ ಮಾಡಿದರೆ ಪೊಲೀಸರನ್ನು ಕರೆಸುವುದಾಗಿ ಎಚ್ಚರಿಸಿದರು.

ಮನೆಯ ಗೋಡೆಗಳ ಮೇಲೆ ಕಂದು ಬಣ್ಣದ ಕಲೆಗಳು ಇರುವ ವಿಚಾರವಾಗಿ ಮತ್ತು ತನ್ನ ಸ್ನೇಹಿತನನ್ನು ಮನೆಗೆ ಆಹ್ವಾನಿಸಿದ ವಿಷಯವಾಗಿ ಇವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಆದಾಗ್ಯೂ, ತನಗೆ 50 ವರ್ಷ ವಯಸ್ಸಾಗಿದ್ದು, ಏನು ತಿನ್ನಬೇಕು ಮತ್ತು ತನ್ನ ಮನೆಗೆ ಸ್ನೇಹಿತನನ್ನು ಆಹ್ವಾನಿಸುವ ಹಕ್ಕು ತನಗಿದೆ ಎಂದು ಆ ವ್ಯಕ್ತಿ ಸ್ಪಷ್ಟಪಡಿಸಿದರು. ಬಾಡಿಗೆದಾರ ಗೋಮಾಂಸ ಅಡುಗೆ ಮಾಡಿದ್ದಕ್ಕೆ ಮನೆಮಾಲೀಕಿ ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ವೀಡಿಯೊ ವೈರಲ್ ಆದ ನಂತರ, ಅನೇಕ ಜನರು ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ.