ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಅಲೆ ಎಬ್ಬಿಸಲು ‘ಸಿಜೆಪಿ’ಯಿಂದ ದಕ್ಷಿಣ ವಲಯ ಸಮನ್ವಯ ಸಮಿತಿ ರಚನೆ

0
245

ಸನ್ಮಾರ್ಗ ವಾರ್ತೆ

ದಕ್ಷಿಣದ ರಾಜ್ಯಗಳಲ್ಲಿ ತನ್ನ ಸಂಘಟನಾತ್ಮಕ ಚಟುವಟಿಕೆಗಳನ್ನು ಬಲಪಡಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಜ್ಜಾಗುತ್ತಿದೆ. ಇದರ ಭಾಗವಾಗಿ ದಕ್ಷಿಣ ವಲಯ ಸಮನ್ವಯ ಸಮಿತಿಯನ್ನು ಘೋಷಿಸಲಾಗಿದೆ. ಐದು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾದೇಶಿಕ ಸಮನ್ವಯ ಮತ್ತು ಚಟುವಟಿಕೆಗಳನ್ನು ಬಲಪಡಿಸುವುದು ಪಕ್ಷದ ಗುರಿಯಾಗಿದೆ. ಕರ್ನಾಟಕದಿಂದ ಭಾವನಾ, ಜುನೈದ್ ಅಹ್ಮದ್, ಮೊಹ್ಸಿನ್, ರಾಹುಲ್ ಫಿಲಿಪ್ ಮತ್ತು ರಾಜೇಶ್ ಮೋಹನ್ ಗೌಡ ಅವರನ್ನು ಪ್ರತಿನಿಧಿಗಳಾಗಿ ನೇಮಿಸಲಾಗಿದೆ.

ತೆಲಂಗಾಣದ ಹೈದರಾಬಾದ್‌ನಲ್ಲಿ ಪಕ್ಷವು ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಹೊರತಾಗಿ ಆಂಧ್ರಪ್ರದೇಶ, ತಮಿಳುನಾಡು, ಕೇರಳಂ, ತೆಲಂಗಾಣ, ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೂ ಹೊಸ ಪದಾಧಿಕಾರಿಗಳನ್ನು ಘೋಷಿಸಲಾಗಿದೆ.

ಆಂಧ್ರಪ್ರದೇಶದಲ್ಲಿ ಚೇತನ್ ಪ್ರಮೋದ್, ಎನ್. ಭಾಸ್ಕರ್ ಮತ್ತು ರಾಜಾ ರತ್ನಂ; ಕೇರಳದಿಂದ ನಿತಿನ್ ನೊಬೆಲ್, ಫೆರೋಜ್ ಖಾನ್, ಇಶಾ ಮರಿಯಮ್ ಹ್ಯಾರಿಸ್ ಹಾಗೂ ಸನೂಪ್ ದೇವ್ ; ತಮಿಳುನಾಡಿನಲ್ಲಿ ಎಳಮರನ್, ಪ್ರಭಾಕರನ್, ಸೆಲ್ವ ಕಾರ್ತಿಕ್, ರಾಜ್ ಕುಮಾರ್ ಮತ್ತು ಶಾಹಜಹಾನ್ ಹಾಗೂ ತೆಲಂಗಾಣದಲ್ಲಿ ಶ್ರೀಜಾ ರೆಡ್ಡಿ, ಸ್ಟಾನ್ಲಿ ಕೊರಾನಿ ಮತ್ತು ಉಪ್ಪು ಅಶೋಕ್ ಅವರು ಪ್ರತಿನಿಧಿಗಳಾಗಿದ್ದಾರೆ. ಸಮಿತಿಯ ಮೊದಲ ಸಭೆಯು ಮುಂದಿನ ವಾರಗಳಲ್ಲಿ ನಡೆಯಲಿದ್ದು, ಚಟುವಟಿಕೆಗಳ ವಿವರವಾದ ರೂಪುರೇಷೆಯನ್ನು ಸಿದ್ಧಪಡಿಸಿ ಘೋಷಿಸಲಾಗುವುದು ಎಂದು ಪಕ್ಷದ ನಾಯಕತ್ವ ತಿಳಿಸಿದೆ.