ಎನ್‍ಸಿಪಿಯ ಮುಂಬೈ ಅಧ್ಯಕ್ಷ ಶಿವಸೇನೆಗೆ

0
474

ಮುಂಬೈ, ಜು. 25: ಎನ್ಸಿಪಿಯ ಮುಂಬೈ ಅಧ್ಯಕ್ಷ ಸಚಿನ್ ಆಹಿರ್ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಗುರುವಾರ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆಯ ಉಪಸ್ಥಿತಿಯಲ್ಲಿ ಅವರು ಶಿವಸೇನೆಗೆ ಪಾದಾರ್ಪಣೆ ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಗೆ ಕೆಲವು ತಿಂಗಳು ಇರುವಾಗ ಅಹಿರ್ ಪಕ್ಷಾಂತರ ಕಾಂಗ್ರೆಸ್-ಎನ್ಸಿಪಿ ಸಖ್ಯಕ್ಕೆ ಹಿನ್ನಡೆಯಾದಂತಾಗಿದೆ.

ಹೊಸ ರಾಜಕೀಯ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಲೇ ಬೇಕಾಗಿದ್ದ ತೀರ್ಮಾನಕ್ಕೆ ಬಂದೆ ಎಂದು ಸಚಿನ್ ಆಹಿರ್ ಹೇಳಿದರು. ಹೆಚ್ಚಿನ ಕಾರ್ಪೊರೇಷನ್‍ಗಳು ಶಿವಸೇನೆಯ ಕೈಯಲ್ಲಿದೆ. ನಗರ ಅಭಿವೃದ್ಧಿಯಲ್ಲಿ ತನ್ನ ಅನುಭವವನ್ನು ಪ್ರಯೋಜಗೊಳಿಸಲಿಕ್ಕಾಗಿ ತಾನು ಶಿವಸೇನೆಗೆ ಸೇರಿದೆ ಎಂದು ಅಹಿರ್ ಹೇಳಿದರು. ಕಾಂಗ್ರೆಸ್ ತೊರೆದು ಶರದ್‍ ಪವಾರ್ ಎನ್‍ಸಿಪಿ ರಚಿಸಿದ ಕಾಲದಿಂದಲೂ ಅವರು ಶರದ್‍ ಪವಾರ್ ಜೊತೆಗಿದ್ದರು. 1999ರಿಂದ ಮೂರು ಬಾರಿ ಅವರು ಶಾಸಕರಾಗಿದ್ದಾರೆ. ಮುಂಬೈಯ ಮೊದಲ ಎನ್‍ಸಿಪಿ ಶಾಸಕ ಕೂಡ ಅವರು ಆಗಿದ್ದಾರೆ. 2009ರಲ್ಲಿ ಪ್ರಥ್ವಿರಾಜ್ ಚವಾಣ್‍ರ ನೇತೃತ್ವದ ಕಾಂಗ್ರೆಸ್-ಎನ್ಸಿಪಿ ಸಖ್ಯ ಸರಕಾರದಲ್ಲಿ ಅಹಿರ್ ನಗರಾಭಿವೃದ್ಧಿ ಸಚಿವರಾಗಿದ್ದರು ಮತ್ತು ಅವರು ಭೂಗತ ಪಾತಕಿ ಅರುಣ್ ಗಾವ್ಲಿಯ ಸಹೋದರ ಪುತ್ರನೂ ಆಗಿದ್ದಾರೆ.