ಉದ್ಯೋಗಾವಕಾಶ: ನೇರ ಸಂದರ್ಶನ

0
181

ಸನ್ಮಾರ್ಗ ವಾರ್ತೆ

ಮಂಗಳೂರು: ಪ್ರಸಾದ್ ಪವರ್ ಇಂಜಿನಿಯರ್ಸ್ ಕಂಪೆನಿಯ ವತಿಯಿಂದ ಮಂಗಳೂರು ಹಾಗೂ ಉಡುಪಿಯಲ್ಲಿ ಖಾಲಿ ಇರುವ ಸರ್ವಿಸ್ ಮ್ಯಾನೇಜರ್ ಹಾಗೂ ಸರ್ವಿಸ್ ಇಂಜಿನಿಯರ್ಸ್ ಹುದ್ದೆಗೆ ನೇರ ಸಂದರ್ಶನವನ್ನು ಅಕ್ಟೋಬರ್ 3 ರಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ಪಡೀಲ್ ಜಿಲ್ಲಾಡಳಿತ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.

ನೇರ ಸಂದರ್ಶನದಲ್ಲಿ ಸರ್ವಿಸ್ ಮ್ಯಾನೇಜರ್ ಹುದ್ದೆಗೆ ಬಿ.ಇ ಅಥವಾ ಎಂ.ಬಿ.ಎ(ಫಿನಾನ್ಸ್ ಅಥವಾ ಮಾರ್ಕೆಟಿಂಗ್), ಸರ್ವಿಸ್ ಇಂಜಿನಿಯರ್ಸ್ ಹುದ್ದೆಗೆ ಐ.ಟಿ.ಐ ಅಥವಾ ಡಿಪೆÇ್ಲೀಮ ಹೊಂದಿರುವ ಪುರುಷ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.