ತೆಲಂಗಾಣ | ಮಸೀದಿ ಹೊರಗೆ ಆರ್‌ಎಸ್‌ಎಸ್ ಶಾಖೆ; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು

0
309

ಸನ್ಮಾರ್ಗ ವಾರ್ತೆ

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನೆದ್ದುರು ಗ್ರಾಮದ ಮಸೀದಿಯೊಂದರ ಹೊರಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) 10 ದಿನಗಳ ಶಾಖೆಯ ಸಮಾರೋಪ ಸಮಾರಂಭವು ನಡೆದಿದ್ದು, ಈ ಕಾರ್ಯಕ್ರಮದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಹಾಗೂ ಕಾರ್ಯಕ್ರಮ ನಡೆದ ಸ್ಥಳದ ಬಗ್ಗೆ ಗಮನ ಸೆಳೆದಿವೆ.

ರಂಗಾರೆಡ್ಡಿ ಜಿಲ್ಲೆಯ ಕಂದಕೂರು ಖಂಡದ ನೆದುರು ಶಾಖೆಯಲ್ಲಿ 10 ದಿನಗಳ “ಶಾಖಾ ಸಪ್ತಾಹ” ಕಾರ್ಯಕ್ರಮದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನೆದ್ದುರು ಮಸೀದಿಯ ನೇರ ಹೊರಗೆ “ಭಾರತ ಮಾತಾ ಪೂಜೆ” ಸೇರಿದಂತೆ ಸಮಾರೋಪ ಸಮಾರಂಭದ ಚಟುವಟಿಕೆಗಳನ್ನು ಭಾಗವಹಿಸುವವರು ನಡೆಸುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಫೋಟೋಗಳು ಮತ್ತು ವೀಡಿಯೊಗಳು ತೋರಿಸುತ್ತವೆ.

ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕ್ರಮಗಳ ಬಗ್ಗೆ ನಿಯಮಿತವಾಗಿ ಪೋಸ್ಟ್ ಮಾಡುವ ಎಸ್.ಎಸ್. ರೆಡ್ಡಿ, ಭಾನುವಾರದಂದು ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಾರ್ಯಕ್ರಮದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದು, 10 ದಿನಗಳ ಕಾರ್ಯಕ್ರಮದ ಅಂತಿಮ ದಿನದಂದು ಇತರ ಚಟುವಟಿಕೆಗಳೊಂದಿಗೆ “ಭಾರತ ಮಾತಾ ಪೂಜೆ”ಯನ್ನು ನಡೆಸಲಾಗಿದೆ ಎಂದು ಬರೆದಿದ್ದಾರೆ.

ಈ ಮಧ್ಯೆ, ‘ಸಿಯಾಸ್‌ತ್ ಡಾಟ್ ಕಾಮ್’ (Siasat.com) ವರದಿಯ ಪ್ರಕಾರ, ಈ ಕಾರ್ಯಕ್ರಮದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ಕಂದಕೂರು ಪೊಲೀಸರು ಸ್ವಯಂಪ್ರೇರಿತವಾಗಿ (suo motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಶಾಖೆ ಎಂದು ಗುರುತಿಸಿದ್ದರೂ ಸಹ, ಈ ಕಾರ್ಯಕ್ರಮಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ಅಲ್ಲದೆ ಪ್ರದೇಶದಲ್ಲಿ ಶಾಂತಿ ನೆಲೆಸಿದೆ ಹಾಗೂ ಆ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ರೆಡ್ಡಿಗೆ ಸೂಚಿಸಲಾಗಿದೆ ಎಂದು ಆ ವರದಿ ತಿಳಿಸಿದೆ.

https://x.com/fireflysmuggler/status/2107099725120090527/video/1