ಇಸ್ರೇಲಿನೊಂದಿಗಿನ ಎಲ್ಲ ವ್ಯವಹಾರಗಳೂ ಸ್ಥಗಿತ: ಫೆಲಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್

0
584

ಗಾಝ ಸಿಟಿ, ಜು.27: ಇಸ್ರೇಲಿನೊಂದಿಗಿನ ಎಲ್ಲ ಒಪ್ಪಂದಗಳ ಎಲ್ಲ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಫೆಲಸ್ತೀನ್ ಅಥಾರಿಟಿ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ತಿಳಿಸಿದರು. ಕಳೆದವಾರ ಇಸ್ರೇಲ್ ಫೆಲಸ್ತೀನ್ ಗ್ರಾಮಗಳ ಮನೆಗಳನ್ನು ಧ್ವಂಸ ಮಾಡಿದ್ದನ್ನು ಪ್ರತಿಭಟಿಸಿ ಈ ನಿರ್ಧಾರ ಮಾಡಲಾಗಿದೆ. ಫೆಲಸ್ತೀನ್ ಲಿಬರೇಷನ್ ಆರ್ಗನೈಝೇಶನ್‍ನ ಸಭೆಯ ನಂತರ ಅಬ್ಬಾಸ್ ಈ ವಿಷಯವನ್ನು ತಿಳಿಸಿದರು.

ಸೂರ್ ಬಹಾರ್ ಗ್ರಾಮದಲ್ಲಿ ಇಸ್ರೇಲ್ ನಡೆಸಿದ ಅತಿಕ್ರಮಣ ಮತ್ತು ಕಟ್ಟಡಗಳನ್ನು ಕೆಡವಿರುವುದು ಜನಾಂಗೀಯ ಉನ್ಮೂಲನವಾಗಿದೆ ಎಂದು ಅಬ್ಬಾಸ್ ಆರೊಪಿಸಿದರು. ಇಸ್ರೇಲ್‍ನೊಂದಿಗೆ ಸಹಿಹಾಕಿದ ಎಲ್ಲ ಒಪ್ಪಂದಗಳನ್ನು ಜಾರಿಗೊಳಿಸುವುದನ್ನು ನಿಲ್ಲಿಸಲಾಗುವುದು. ಇದು ನಮ್ಮ ನಿರ್ಧಾರ. ಅತಿಕ್ರಮಿತ ವೆಸ್ಟ್ ಬ್ಯಾಂಕಿನ ರಮಲ್ಲಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಬ್ಬಾಸ್ ಮಾತಾಡುತ್ತಿದ್ದರು.