ಸನ್ಮಾರ್ಗ ವಾರ್ತೆ
ರಿಯಾದ್: ಯುದ್ಧದಿಂದ ತೀವ್ರವಾಗಿ ಹಾನಿಗೊಳಗಾದ ಗಾಝಾದ ಶಿಕ್ಷಣ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಮತ್ತು ಮಕ್ಕಳಿಗೆ ಹೊಸ ಭರವಸೆಯನ್ನು ನೀಡುವ ಸಲುವಾಗಿ ರಿಯಾದ್ ಮಾಡಲ್ ಸ್ಕೂಲ್ ನಿರ್ಮಿಸಲು ಸೌದಿ ಅರೇಬಿಯ ನಿರ್ಧರಿಸಿದೆ. ಅತ್ಯಾಧುನಿಕ ಸೌಲಭ್ಯಗಳು ಮತ್ತು ಉನ್ನತ ಮಟ್ಟದ ಕಲಿಕಾ ವಾತಾವರಣಈ ರಿಯಾದ್ ಮಾಡಲ್ ಶಾಲೆಯಲ್ಲಿ ಇರಲಿದೆ ಎನ್ನಲಾಗಿದೆ. ಗಾಝಾದ ಜನರಿಗೆ ಸೌದಿ ಅರೇಬಿಯಾ ನೀಡುತ್ತಿರುವ ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಿಲೀಫ್ ಆಪರೇಷನ್ಸ್ ಆಂಡ್ ಪ್ರೋಗ್ರಾಮ್ಸ್ ವಿಭಾಗ ಅಸಿಸ್ಟೆಂಟ್ ಸೂಪರ್ ವೈಸರ್ ಜನರಲ್ ಅಹ್ಮದ ಅಲ್ ಬೈಸ್ ಮತ್ತು ಸೌದಿ ಸೆಂಟರ್ ಫಾರ್ ಕಲ್ಚರಲ್ ಆಂಡ್ ಹೆರಿಟೇಜ್ ಚೇರ್ಮೆನ್ ಇಝ್ಝಾಂ ಅಬೂ ಖಲೀಲ್ ತಿಳಿಸಿದ್ದಾರೆ.
ಕಿಂಗ್ ಸಲ್ಮಾನ್ ರಿಲೀಫ್ ಕೇಂದ್ರ ಮತ್ತು ಸೌದಿ ಸಾಂಸ್ಕೃತಿಕ ಪರಂಪರೆ ಕೇಂದ್ರ ಗಾಝದಲ್ಲಿ ಸೌದಿ ಮಾಡೆಲ್ ಸ್ಕೂಲ್ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದ ಮಾಡಿಕೊಂಡಿದೆ. ಗಾಝದಲ್ಲಿ ಯುದ್ಧ ಕಾಲದಲ್ಲ ಸಂಕಷ್ಟಕ್ಕೆ ಬಿದ್ದಿರುವ ಮಕ್ಕಳಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪುನರರಾಂಭಿಸುವುದಕ್ಕೆ ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಗಾಝದ ಪರಿಸ್ಥಿತಿಗೆ ತಕ್ಕಂತೆ ಎರಡು ಶಿಫ್ಟ್ಗಳಲ್ಲಿ ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ 720 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಪಡೆಯುವ ಅವಕಾಶ ಸಿಕ್ಕಿದೆ.
ಶಾಲೆಯನ್ನು ತೆರೆಯುವುದು ಕಾರ್ಯಪ್ರವೃತ್ತವಾಗುವಂತೆ ಮಾಡುವುದು. ತಾಂತ್ರಿಕವಾದ ಮೂಲಭೂತ ಸೌಲಭ್ಯಗಳು, ತರಗತಿ ಕೋಣೆಗಳು ಪೀಠೋಪಕರಣಗಳು, ಕಲಿಕೆಗೆ ಸಹಾಯಕರನ್ನುಲಭ್ಯಗೊಳಿಸುವುದು, ನೀರು, ಶುಚೀಕರಣ, ಸೌರಶಕ್ತಿ, ಇಂಟರ್ನೆಟ್,ವೆಂಟಿಲೇಶನ್, ನಿರೀಕ್ಷಣಾ ಕೆಮರಾಗಳು ಇವುಗಳ ನವೀಕರಣದ ಕೆಲಸ ರಿಯಾದ್ ಮಾಡಲ್ ಸ್ಕೂಲ್ ಒಳಗೊಂಡಿದೆ.
ಪ್ರತ್ಯೇಕ ಗ್ರೂಪ್ ಮತ್ತು ವೈಯಕ್ತಿಕ ಸೆಶನ್ಗಳು, ಯುದ್ಧ ಪೀಡಿತ ಮಕ್ಕಳ ಮಾನಸಿಕ ಆರೋಗ್ಯ, ಸಾಮಾಜಿಕ ಸ್ಥಿರತೆ ಉತ್ತಮ ಪಡಿಸುವ ಯೋಜನೆಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಮನರಂಜನೆ, ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಶಿಕ್ಷಣ, ಆಡಳಿತ, ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೌದಿ ಅರೇಬಿಯದ ಈ ಯೋಜನೆ ಒದಗಿಸುವುದು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಕುಟುಂಬಗಳಿಂದ 3,715 ವ್ಯಕ್ತಿಗಳಿಗೆ ಇದರ ಪ್ರಯೋಜನ ಲಭಿಸುತ್ತದೆ. ಗಾಝದಲ್ಲಿ ಯುದ್ಧ ಪೀಡಿತ ಮಕ್ಕಳಿಗೆ ಸಂರಕ್ಷಿತ ಮತ್ತು ಸ್ಥಿರವಾದ ಒಂದು ಶಿಕ್ಷಣದ ವಾತಾವರಣವನ್ನು ಒದಗಿಸಿಕೊಡುವುದು. ಪತನಗೊಂಡ ಶಿಕ್ಷಣ ಕ್ಷೇತ್ರವನ್ನು ಪುನರ್ ನಿರ್ಮಿಸುವುದು ಕಿಂಗ್ ಸಲ್ಮಾನ್ ರಿಲೀಫ್ ಕೇಂದ್ರ ಪ್ರಯತ್ನವಾಗಿದೆ ಎನ್ನಲಾಗಿದೆ.












