ಹೂತಿ ಬಂಡುಕೋರರ ವಿರುದ್ಧ ಕ್ರಮ ಅನಿವಾರ್ಯ: ಯಮನ್

0
155

ಸನ್ಮಾರ್ಗ ವಾರ್ತೆ

ಯೆಮೆನ್ ಸರ್ಕಾರದ ವಿದೇಶಾಂಗ ಸಚಿವರು, ಹೌತಿ ಬಂಡುಕೋರರ ವಿರುದ್ಧದ ಹೋರಾಟವು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಹಿಂದೆ ವಿಫಲವಾದ ಕದನ ವಿರಾಮ ಒಪ್ಪಂದಗಳಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ತಳ್ಳಿಹಾಕಿದ್ದಾರೆ.

ಯೆಮೆನ್ ಜನರ ರಕ್ಷಣೆಗಾಗಿ ಮತ್ತು ದೇಶವು ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆಗೆ ಬೆದರಿಕೆಯಾಗುವುದನ್ನು ತಡೆಯಲು ಹೌತಿಗಳ ವಿರುದ್ಧದ ಸಶಸ್ತ್ರ ಹೋರಾಟ ಅತ್ಯಂತ ಮುಖ್ಯ ಎಂದು ಯೆಮೆನ್ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಹೌತಿಗಳ ಬಂಡುಕೋರರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಕಾರಣಕ್ಕೆ, ಇನ್ನು ಮುಂದೆ ಯಾವುದೇ ವಿಫಲ ಕದನ ವಿರಾಮಗಳಿಗೆ ಮರಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ತೈಜ್ ನಗರದ ಮೇಲೆ ಹೌತಿಗಳು ಹೇರಿರುವ ದಿಗ್ಬಂಧನದಿಂದಾಗಿ ಆಹಾರ, ಇಂಧನ ಮತ್ತು ವೈದ್ಯಕೀಯ ಸರಬರಾಜುಗಳ ತೀವ್ರ ಕೊರತೆಯುಂಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೌತಿಗಳು ಕೇವಲ ಯೆಮೆನ್ ದೇಶಕ್ಕೆ ಮಾತ್ರವಲ್ಲದೆ, ಜಾಗತಿಕ ವ್ಯಾಪಾರ ಮತ್ತು ಪ್ರಾದೇಶಿಕ ಸ್ಥಿರತೆಗೂ ದೊಡ್ಡ ಅಪಾಯವಾಗಿ ಪರಿಣಮಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.