ಸನ್ಮಾರ್ಗ ವಾರ್ತೆ
ಸೌದಿ ಅರೇಬಿಯಾ ಸರ್ಕಾರವು ತನ್ನ ಪ್ರಾದೇಶಿಕ ದೇಶಗಳಾದ ಕುವೈತ್, ಕತಾರ್ ಮತ್ತು ಈಜಿಪ್ಟ್ನೊಂದಿಗೆ ಇಂಧನ ವಲಯದಲ್ಲಿ ಪರಸ್ಪರ ಸಹಕಾರವನ್ನು ವಿಸ್ತರಿಸಲು ಮೂರು ಪ್ರಮುಖ ತಿಳಿವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದೆ. ರಿಯಾದ್ನಲ್ಲಿ ನಡೆದ ಸಭೆಯಲ್ಲಿ ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಅವರು ಈ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.
ಕುವೈತ್ ನೊಂದಿಗೆ ವಿದ್ಯುತ್, ನವೀಕರಿಸಬಹುದಾದ ಇಂಧನ, ವಿದ್ಯುತ್ ಗ್ರೀಡ್ ಪರಸ್ಪರ ಸಂಪರ್ಕ ಮತ್ತು ಇಂಧನ ದಕ್ಷತೆ ಕ್ಷೇತ್ರಗಳಲ್ಲಿ ಕೈಜೋಡಿಸುವುದು, ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಸೈಬರ್ ಭದ್ರತೆಯಲ್ಲಿ ಸಹಕಾರ, ಹವಾಮಾನ ಬದಲಾವಣೆ ತಡೆಗಟ್ಟುವ ತಂತ್ರಗಳು ಮತ್ತು ವೃತ್ತಾಕಾರದ ಕಾರ್ಬನ್ ಆರ್ಥಿಕತೆ ಕುರಿತು ಜಂಟಿ ಪ್ರಯತ್ನಗಳ ಒಪ್ಪಂದ ನಡೆಸಿದ್ದು
ಕತಾರ್ ನೊಂದಿಗೆ ಕಚ್ಚಾ ತೈಲ, ಪೆಟ್ರೋಲಿಯಮ್ ಉತ್ಪನ್ನಗಳು, ನೈಸರ್ಗಿಕ ಅನಿಲ, ಸಂಸ್ಕರಣೆ , ಪೆಟ್ರೋಕೆಮಿಕಲ್ಸ್ ಮತ್ತು ಕ್ಲೀನ್ ಹೈಡ್ರೋಜನ್ ವಲಯಗಳಲ್ಲಿ ಸಹಕಾರ, ತೈಲ ಮತ್ತು ಅನಿಲ ಸಾಗಣೆಗಾಗಿ ಜಂಟಿ ಪೈಪ್ಲೈನ್ ಯೋಜನೆಗಳ ಪರಿಶೀಲನೆ.
ಹವಾಮಾನ ಬದಲಾವಣೆ ಹಾಗೂ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ನಡೆಯುವ ಮಾತುಕತೆಗಳಲ್ಲಿ ಪರಸ್ಪರ ಸಮನ್ವಯತೆ ಸಾಧಿಸುವುದು ಮೊದಲಾದ ಒಪ್ಪಂದಗಳನ್ನೊಳಗೊಂಡಿದೆ
ಈಜಿಪ್ಟ್ ನೊಂದಿಗೆ ಕಚ್ಚಾ ತೈಲ, ಪೆಟ್ರೋಲಿಯಮ್ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ವ್ಯಾಪಾರ, ಸಾಗಣೆ ಮತ್ತು ಸಂಗ್ರಹಣೆಗೆ ಆದ್ಯತೆ, ಇಂಧನ ಮಾರುಕಟ್ಟೆ ಮಾರುಕಟ್ಟೆ ಏಕೀಕರಣ, ಇಂಧನ ಭದ್ರತೆಯನ್ನು ಖಚಿತಪಡಿಸುವುದು, ಇಂಧನ ಕೇಂದ್ರಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯಲ್ಲಿ ಸೌದಿ ಅರೇಬಿಯಾದ ಅನುಭವವನ್ನು ಈಜಿಪ್ಟ್ಗೆ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ
ಈ ಒಪ್ಪಂದಗಳ ಮೂಲಕ ಮಧ್ಯಪ್ರಾಚ್ಯ ದೇಶಗಳು ಇಂಧನ ಕ್ಷೇತ್ರದಲ್ಲಿ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ ಪ್ರಾದೇಶಿಕ ಇಂಧನ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿವೆ












