ಸನ್ಮಾರ್ಗ ವಾರ್ತೆ
ಅಹ್ಮದಾಬಾದ್: ನವರಾತ್ರಿ ಹಬ್ಬಾಚರಣೆ ಅಂಗವಾಗಿ ನಡೆಯುವ ಗರ್ಬಾ ನೃತ್ಯ ಕಾರ್ಯಕ್ರಮದಿಂದ ಮುಸ್ಲಿಮರನ್ನು ದೂರ ಇಡುವಂತೆ ಹಿಂದುತ್ವ ಸಂಘಟನೆಗಳು ಘೋಷಿಸಿವೆ. ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾರ್ಯಕರ್ತರು ಗರ್ಬಾ ಸ್ಥಳಕ್ಕೆ ಬಂದು ವೇದಿಕೆಯಲ್ಲಿದ್ದ ಮುಸ್ಲಿಮರು ಮತ್ತು ಇತರ ಹಿಂದೂಯೇತರರು ತಕ್ಷಣ ಸ್ಥಳದಿಂದ ಹೊರಹೋಗಬೇಕು ಎಂಬ ಘೋಷಣೆ ಕೂಗಿದ್ದಾರೆ.
ಅಕ್ಟೋಬರ್ ಹದಿನಾಲ್ಕಕ್ಕೆ ಅಹ್ಮದ್ ಬಾದಿನಲ್ಲಿ ಗಾಯಕ ಆದಿತ್ಯ ಗಾಡ್ವಿ ಭಾಗವಹಿಸಿದ್ದ ಗರ್ಬಾ ಕಾರ್ಯಕ್ರಮದಲ್ಲಿ ಅನ್ಯ ಮತೀಯರು ಮತ್ತು ಮುಸ್ಲಿಮರು ವೇದಿಕೆಯಿಂದ ಸ್ವಯಂ ಹೊರಹೋಗಿ ಎಂದು ಮೈಕ್ನಲ್ಲಿ ಉದ್ಘೋಷಕ ಘೋಷಿಸಿದ ಘಟನೆ ನಡೆದಿದೆ. ಸಂದೇಹ ಕಂಡು ಬಂದರೆ ಅಂತಹವರನ್ನು ಗುರುತಿಸಿ ತಿಳಿಸಬೇಕು ಮತ್ತು ಹೆಲ್ಪ್ ಲೈನ್ಗೆ ಕರೆ ಮಾಡುವ ಸಲುವಾಗಿ ಫೋನ್ ನಂಬರ್ ಅನ್ನು ಉದ್ಘೋಷಕ ಹೇಳಿದ್ದಾನೆ.
ಆದರೆ,ಈ ಘೋಷಣೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ತನ್ನ ಕಾರ್ಯಕ್ರಮದ ವೇದಿಕೆಯನ್ನು ಕೆಲವರು ದುರುಪಯೋಗಿಸಿದರು ಎಂದು ಗಾಯಕ ಆದಿತ್ಯ ಗಾಡ್ವಿ ಹೇಳಿದ್ದಾರೆ.
ಬರೋಡದಲ್ಲಿ ಇನ್ನೊಂದು ಕಾರ್ಯಕ್ರಮದಲ್ಲಿ ಕೂಡ ಇಂತಹ ಪ್ರಸಂಗ ಜರಗಿತು. ಯುನೈಟೆಡ್ ವೇ ಆಫ್ ಬರೋಡ ಆಯೋಜಿಸಿದ ಕಾರ್ಯಕ್ರಮ ಇದಾಗಿತ್ತು. ಗುಜರಾತಿನ ಭಾವ್ನಗರದ ಕಾರ್ಯಕ್ರಮಕ್ಕೆ ಮುಸ್ಲಿಂ ಸಂಗೀತಗಾರರನ್ನು ಕರೆದದ್ದಕ್ಕೆ ಕುರಿತಂತೆ ಘರ್ಷಣೆ ನಡೆದಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಹಿತ ಕೆಲವು ಸಂಘಟನೆಗಳು ಅಕ್ಟೋಬರ್ ಹನ್ನೆರಡರಂದು ಪ್ರತಿಭಟಿಸಿದ್ದು, ನಲ್ವತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದರು.












