ಸನ್ಮಾರ್ಗ ವಾರ್ತೆ
ಟೆಹ್ರಾನ್: ಅಮೆರಿಕವು ಇರಾನ್ನ ಶರತ್ತುಗಳನ್ನು ಒಪ್ಪಿಕೊಳ್ಳುವವರೆಗೆ ಹಾರ್ಮುಝ್ ಜಲಸಂಧಿಯು ಮುಚ್ಚಿರುತ್ತದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಅಮೆರಿಕದ ದಾಳಿಯನ್ನು ತಡೆಯಲು ಇರಾನ್ ಮಿಲಿಟರಿ ಸಿದ್ಧತೆ ನಡೆಸುತ್ತಿದೆ ಎಂದೂ ಅರಾಘ್ಚಿ ತಿಳಿಸಿದ್ದಾರೆ.
“ಅಮೆರಿಕವು ಹಿಂದೆ ಸಹಿ ಹಾಕಿದ ತಿಳಿವಳಿಕೆ ಪತ್ರದ (ಎಂಡಿಒ) ನಿಬಂಧನೆಗಳಿಗೆ ಬದ್ಧವಾಗಿರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅವು ಈಡೇರಿದರೆ, ನಾವು ಇತರ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಪರಮಾಣು ಸಮಸ್ಯೆಯು ಕೇವಲ ಒಂದು ನೆಪವಾಗಿದೆ. ಅಮೆರಿಕವು ವಾಸ್ತವವಾಗಿ ವಿರೋಧಿಸುತ್ತಿರುವುದು ಮತ್ತು ತಿರಸ್ಕರಿಸುತ್ತಿರುವುದು ಇರಾನ್ನ ಸಿದ್ಧಾಂತವನ್ನು,” ಎಂದು ಅರಾಘ್ಚಿ ಹೇಳಿದರು.
ಯುದ್ಧದ ಮೂಲಕ ಯುಎಸ್ ತನ್ನ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ಗೆ ತಿಳಿದಿದೆ ಎಂದು ಅವರು ಹೇಳಿದರು.
ನಿನ್ನೆ ಟೆಹ್ರಾನ್ಗೆ ಆಗಮಿಸಿದ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್, ಇರಾನ್ ಅಧ್ಯಕ್ಷ ಮಸೂದ್ ಪೆಸ್ಕೋವ್ ಅವರೊಂದಿಗೆ ಮಾತುಕತೆ ನಡೆಸಿದರು. ಶರತ್ತುಗಳನ್ನು ಒಪ್ಪಿಕೊಳ್ಳದೆ ಅಮೆರಿಕದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇರಾನ್ ಮಾತುಕತೆಗಳಲ್ಲಿ ಸ್ಪಷ್ಟಪಡಿಸಿದೆ.
ಆದಾಗ್ಯೂ, ಇರಾನ್ನೊಂದಿಗೆ ಶಾಂತಿ ಒಪ್ಪಂದಕ್ಕೆ ಬರುವುದು ಅತ್ಯಂತ ಕಷ್ಟಕರ ಎಂದು ಯುಎಸ್ ಪ್ರತಿಕ್ರಿಯಿಸಿದೆ. ಇರಾನ್ ಹಾರ್ಮುಹ್ ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೆ ಆರ್ಥಿಕ ಒತ್ತಡವು ಮುಂದುವರಿಯುತ್ತದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದರು.
ಇರಾನ್ನಲ್ಲಿ ಯಶಸ್ಸು ಸಾಧಿಸಲು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಬೇಕಾಗಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪೆಟ್ರೋಲ್ ಬೆಲೆ ಶೀಘ್ರದಲ್ಲೇ ಕುಸಿಯಲಿದೆ ಎಂದೂ ಅವರು ದಾವೆ ಮಾಡಿದರು.
ಈ ಮಧ್ಯೆ, ಹಾರ್ಮುಝ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳು ಸಮುದ್ರದ ಮೈನ್ಗಳಿಗೆ ಡಿಕ್ಕಿಹೊಡೆದು ಬೆಂಕಿ ಹೊತ್ತಿಕೊಂಡಿವೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ಆದಾಗ್ಯೂ, ಯುಎಸ್ ಸೆಂಟ್ರಲ್ ಕಮಾಂಡ್ ಈ ವರದಿಗಳನ್ನು ನಿರಾಕರಿಸಿದೆ.












