ನ್ಯೂಯಾರ್ಕಿನಲ್ಲಿ ಭಾರತದ ಮೂಲದ ಮಗು ಕೊಲ್ಲಲ್ಪಟ್ಟ ಸ್ಥಿತಿಯಲ್ಲಿ ಪತ್ತೆ

0
244

ಸನ್ಮಾರ್ಗ ವಾರ್ತೆ

ಅಮೆರಿಕ: ನ್ಯೂಯಾರ್ಕ್‌ ಸಿಟಿಯ ಕ್ವೀನ್ಸ್‌ನ ರಿಚ್‌ಮಂಡ್ ಹಿಲ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ಮೂಲದ ಕುಲ್ದೀಪ್ ಸಿಂಗ್ ಮತ್ತು ಫ್ರಾನ್ಸಿಸ್ ಕ್ಯಾಬೆಲ್ಲೊ (32) ದಂಪತಿಯ ಐದು ವರ್ಷದ ಮಗಳು ಫೇಬಿಯಾನಾ ಕ್ಯಾಬೆಲ್ಲೊ ಮೃತಪಟ್ಟ ಬಾಲಕಿ.

ತಾನೇ ಮಗಳನ್ನು ಕೊಲೆ ಮಾಡಿರುವುದಾಗಿ ಸ್ವತಃ ತಾಯಿ ಫ್ರಾನ್ಸಿಸ್ ಕ್ಯಾಬೆಲ್ಲೊ ತುರ್ತು ಸಹಾಯವಾಣಿ 911 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬಾಲಕಿಯ ತಾಯಿಯ ವಿರುದ್ಧ ಎರಡನೇ ಹಂತದ ಕೊಲೆ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಆರೋಪಿ ಫ್ರಾನ್ಸಿಸ್ ಕ್ಯಾಬೆಲ್ಲೊಗೆ ಈ ಹಿಂದೆಯೂ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದವು ಮತ್ತು ಅವರು ಔಷಧಿ ಸೇವಿಸುವುದನ್ನು ನಿಲ್ಲಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗುವಿನ ಅಂತಿಮ ವಿಧಿವಿಧಾನಗಳಿಗಾಗಿ ದುಃಖತಪ್ತರಾದ ತಂದೆ ಕುಲ್ದೀಪ್ ಸಿಂಗ್ ಸಾರ್ವಜನಿಕರಿಂದ ಆರ್ಥಿಕ ಸಹಾಯವನ್ನು ಕೋರಿದ್ದಾರೆ.