ಸನ್ಮಾರ್ಗ ವಾರ್ತೆ
ಉಡುಪಿ: ಸಾಮಾಜಿಕ ಕಾರ್ಯಕರ್ತ ಹಾಗೂ ಜಮಿಯತುಲ್ ಫಲಾಹ್ ಉಡುಪಿ ಘಟಕದ ಅಧ್ಯಕ್ಷರಾಗಿದ್ದ ಖತೀಬ್ ಅಬ್ದುಲ್ ರಶೀದ್ (68) ಅವರು ಅಲ್ಪ ಕಾಲದ ಅನಾರೋಗ್ಯದ ಕಾರಣ ಇಂದು ನಿಧನರಾದರು.ಅವರು ಸಾಮುದಾಯಿಕ, ಸಾಮಾಜಿಕ ಹಾಗೂ ಕೋಮು ಸೌಹಾರ್ದತೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಖತೀಬ್ ಅಬ್ದುಲ್ ರಶೀದ್ ಅವರು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದರು ಜಮಿಯತುಲ್ ಫಲಾಹ್ (ಉಡುಪಿ): ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ: ಸ್ಥಾಪಕ ಸದಸ್ಯರು ಹಾಗೂ ಮಾಜಿ ಹಿರಿಯ ಉಪಾಧ್ಯಕ್ಷರಾಗಿ,ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆಯ ಅಧ್ಯಕ್ಷರಾಗಿ, ಸಹಬಾಳ್ವೆ: ಆರಂಭಿಕ ಸದಸ್ಯರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದರು.
ಅವರು ಕೋಮು ಸೌಹಾರ್ದ ವೇದಿಕೆ: ಸಕ್ರಿಯ ಕಾರ್ಯಕರ್ತರಾಗಿದ್ದರು. ಸಯ್ಯದಿನ ಅಬುಬಕ್ಕರ್ ಸಿದೀಕ್ ಜಾಮೀಯಾ ಮಸೀದಿ ಅಧ್ಯಕ್ಷರಾಗಿ, ಎಸ್.ಐ.ಓ (SIO) ಮಲ್ಪೆ ಶಾಖೆಯ ಮಾಜಿ ಅಧ್ಯಕ್ಷರಾಗಿದ್ದರು.ಇದರ ಹೊರತಾಗಿ ಅವರು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಬೆಳವಣಿಗೆಗೆ ಶ್ರಮಿಸಿದ್ದರು.
ಅವರ ಅಗಲಿಕೆಗೆ ಮುಹಮ್ಮದ್ ಮೌಲ (ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ),ಪ್ರೊ. ಫಣಿರಾಜ್ (ಸಂಚಾಲಕರು, ಸಹಬಾಳ್ವೆ),ಪ್ರೊ. ಅಬ್ದುಲ್ ಅಝೀಜ್ (ಜಿಲ್ಲಾಧ್ಯಕ್ಷರು, ಜಮಾಅತೆ ಇಸ್ಲಾಮಿ ಹಿಂದ್),ಹುಸೇನ್ ಕೋಡಿಬೆಂಗ್ರೆ (ರಾಜ್ಯ ಕಾರ್ಯದರ್ಶಿ, APCR),ಮುಹಮ್ಮದ್ ಇಸ್ಮಾಯಿಲ್ (ಅಧ್ಯಕ್ಷರು, ಸಾಲಿಹಾತ್ ಸಮೂಹ ಸಂಸ್ಥೆ),ಇದ್ರಿಸ್ ಹೂಡೆ (ಜಿಲ್ಲಾಧ್ಯಕ್ಷರು, ವೆಲ್ಫೇರ್ ಪಾರ್ಟಿ) ಸೇರಿ ಪ್ರಮುಖ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.












