ಸನ್ಮಾರ್ಗ ವಾರ್ತೆ
ಪುತ್ತೂರು: ಇಲ್ಲಿನ ಮಿನಿ ವಿಧಾನಸೌಧ ಬಳಿ ಲೋಕ್ ತಂತ್ರ ಬಚಾವೋ ಆಂದೋಲನ ಸಮಿತಿ ಪುತ್ತೂರು ವತಿಯಿಂದ ಅ.23 ರಂದು ಅವೈಜ್ಞಾನಿಕ ಎಸ್ಐಆರ್ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕಾಂಗ್ರೆಸ್ ವಕ್ತಾರ ಅಮಲ ರಾಮಚಂದ್ರ ಮಾತನಾಡುತ್ತಾ, ವಿದೇಶಿಯರ ಹೆಸರು ಹೇಳಿ ಇಲ್ಲಿನ ಮತದಾರರ ಹಕ್ಕುಗಳನ್ನು ಕಬಳಿಸಿ ಅವರನ್ನು ಮತದಾನದ ಪ್ರಕ್ರಿಯೆಯಿಂದ ದೂರಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮತಕಳ್ಳತನದಂಹ ಹೇಯ್ ಕ್ರತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸಕ್ತ ಚುನಾವಣಾ ಮುಖ್ಯ ಆಯುಕ್ತರು ನೆರವಾಗುತ್ತಿದ್ದಾರೆ ಎಂಬ ಅನುಮಾನ ಜನರಲ್ಲಿ ದಷ್ಟವಾಗಿದೆ. ಆದ್ದರಿಂದ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ರಕ್ಷಣಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸಿಪಿಐಎಂಎಲ್ ಮುಖಂಡ ರಾಮಣ್ಣ ವಿಟ್ಲ ಮಾತನಾಡುತ್ತಾ ಈ ಅವೈಜ್ಞಾನಿಕ ಎಸ್ ಐ ಆರ್ ನೆಪವೊಡ್ಡಿ ಇಲ್ಲಿ ಅಲ್ಪಸಂಖ್ಯಾತರ ದಲಿತರ ಹೆಸರನ್ನು ರದ್ದು ಪಡಿಸುವ ವ್ಯವಸ್ಥಿತ ಸಂಚಿನ ವಿರುದ್ಧ ಜನಜಾಗೃತಿ ಅಗತ್ಯವಾಗಿದೆ ಈ ಸರಕಾರಕೊಂದು ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಇದರ ಅಸ್ಲಮ್ ಪಂಜಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೆಲ್ಫೇರ್ ಪಾರ್ಟಿಯ ದಿವಾಕರ್ ಬೋಳೂರು, ಮಾನವ ಬಂಧುತ್ವ ವೇದಿಕೆಯ ರಿಯಾಝ್ ಪರ್ಲಡ್ಕ,
ಬಿಲ್ಲವ ಸಮಾಜದ ಉಲ್ಲಾಸ್ ಕೋಟ್ಯಾನ್, ಜಮಾತೆ ಇಸ್ಲಾಮಿ ಸಂಘಟನೆಯ ಯು ಎ ಹಸೀಬ್ ಉಪಸ್ಥಿತರಿದ್ದರು. ಲೋಕತಂತ್ರ ಬಚಾವೋ ಆಂದೋಲನ ಸಮಿತಿಯ ಸದಸ್ಯ ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.












