ಸನ್ಮಾರ್ಗ ವಾರ್ತೆ
ಮಹಾರಾಷ್ಟ್ರ: ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಭಾರತೀಯ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಆದರೆ ಮತದಾರರ ಪಟ್ಟಿಯಕುರಿತಂತೆ ವಿರೋಧ ಮತ್ತು ದೂರುಗಳನ್ನು ಸಲ್ಲಿಸುವ ಸಮಯ ಅವಧಿಯನ್ನು ವಿಸ್ತರಿಸಬೇಕೆಂದು ಅರ್ಜಿದಾರನ ಅರ್ಜಿಗೆ ಕೋರ್ಟು ಅಂಗೀಕಾರ ನೀಡಿಲ್ಲ. ಚೀಫ್ ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ಜೊಯ್ಮಾಲ್ಯ ಬಾಗ್ಚಿ, ವಿ. ಮೋಹನರನ್ನೊಳಗೊಂಡ ಸುಪ್ರೀಂ ಕೋರ್ಟು ಪೀಠ ಈ ಪ್ರಕರಣವನ್ನು ನವೆಂಬರ್ ಐದಕ್ಕೆ ಪುನಃ ವಿಚಾರಣೆಗೆತ್ತಿಕೊಳ್ಳಲಿದೆ.
ಚುನಾವಣಾ ಆಯೋಗದ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ ಮಹಾರಾಷ್ಟ್ರದಲ್ಲಿ ಶೇ 33ರಷ್ಟು ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ. ಮುಂಬೈ ಪುಣೆಯಲ್ಲಿ ಸುಮಾರು 3,500ರಷ್ಟು ಅಭಿವೃದ್ಧಿ ಯೋಜನೆಗಳು ನಡೆಯುತ್ತಿದ್ದು ಇದರ ಭಾಗವಾಗಿ ವಾಸ್ತವ್ಯ ಸ್ಥಳ ಬದಲಿಸಬೇಕಾಗಿ ಬಂದವರನ್ನು ಕೂಡ ವೋಟರ್ ಲೀಸ್ಟ್ನಿಂದ ತೆಗೆದು ಹಾಕಲಾಗಿದೆ. ಈ ಜನರನ್ನು ‘ವ್ಯಕ್ತಿ ಪತ್ತೆಯಾಗಿಲ್ಲ’ ಎಂಬ ಕಾರಣ ನೀಡಿ ವ್ಯಾಪಕವಾಗಿ ಕೈಬಿಡಲಾಗಿದೆ. ಇದಲ್ಲದೆ, ತಾಂತ್ರಿಕ ಕಾರಣಗಳನ್ನು ನೀಡಿ ಲಕ್ಷಾಂತರ ಹೆಸರುಗಳನ್ನು ವಜಾಗೊಳಿಸಲಾಗಿದೆ. ಇದೇವೇಳೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಲು ಕೋರ್ಟ್ ಸದ್ಯಕ್ಕೆ ನಿರಾಕರಿಸಿದೆಯಾದರೂ, ಈ ಕುರಿತು ವಿಸ್ತೃತ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.












