ಸಿಂಗಾಪುರದಲ್ಲಿ ಬೃಹತ್ ಇಂಧನ ಸಂಗ್ರಹ ಭೂಗತ ಕೋಣೆ: ಹಾರ್ಮುಝ್ ಸಮಸ್ಯೆಯನ್ನು ಮೀರಲು ಸೌದಿ ತಂತ್ರ

0
231

ಸನ್ಮಾರ್ಗ ವಾರ್ತೆ

ಏಷ್ಯಾದ ದೇಶಗಳಿಗೆ ಇಂಧನ ಪೂರೈಕೆಯನ್ನು ಹೆಚ್ಚು ಸುರಕ್ಷಿತವಾಗಿಸಲು ಸೌದಿ ಅರೇಬಿಯಾ ಒಂದು ಪ್ರಮುಖ ಯೋಜನೆಯ ರೂಪಿಸಿದೆ. ಸಿಂಗಾಪುರದ ದುರಂಗ್ ದ್ವೀಪದಲ್ಲಿರುವ ಭೂಗತ ಕೋಣೆಗಳಲ್ಲಿ ಹೆಚ್ಚಿನ ಪ್ರಮಾಣದ ಸೌದಿ ಕಚ್ಚಾ ತೈಲವನ್ನು ಸಂಗ್ರಹಿಸಲು ಎರಡು ದೇಶಗಳು ಒಪ್ಪಿಕೊಂಡಿವೆ . ಈ ಯೋಜನೆಯನ್ನು 2027ರ ದ್ವಿತೀಯಾರ್ಧದ ವೇಳೆಗೆ ಸಂಪೂರ್ಣ ಜಾರಿಗೆ ತರಲಾಗುವುದು.

ಮಧ್ಯ ಪ್ರಾಚ್ಯದ ಉದ್ವಿಗ್ನತೆಗಳು ಮತ್ತು ಹಾರ್ಮೋಜ್ ಜಲಸಂಧಿಯಲ್ಲಿನ ಹಡಗು ಸಾಗಣೆಯ ಅಡ್ಡಿಯು ಏಷ್ಯಾ ಕ್ಕೆ ತೈಲಸಾಗಾಣೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಯುದ್ಧದ ಮೊದಲು ಏಷ್ಯಾದ ದೇಶಗಳು ತಮ್ಮ ತೈಲ ಅಗತ್ಯಗಳಲ್ಲಿ ಮೂರನೇ ಎರಡರಷ್ಟು ಭಾಗವನ್ನು ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಂಡವು. ಆದರೆ ನಿರಂತರ ಜಾಗತಿಕ ಅಡೆತಡೆಗಳಿಂದಾಗಿ ಅನೇಕ ದೇಶಗಳು ತಮ್ಮ ಸಂಗ್ರಹದಲ್ಲಿರುವ ತೈಲವನ್ನೇ ಬಳಸಬೇಕಾಯಿತು.

ಇದೀಗ ಈ ಸಮಸ್ಯೆಗೆ ಸೌದಿ ಅರೇಬಿಯಾ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದೆ. , ಏಷ್ಯಾದ ರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ತೈಲವನ್ನು ಸಂಗ್ರಹಿಸಿ ಇಟ್ಟು ಅದನ್ನು ಆ ಬಳಿಕ ಏಷ್ಯನ್ ರಾಷ್ಟ್ರಗಳಿಗೆ ಸಾಗಣೆ ಮಾಡುವ ಯೋಜನೆ ಹಮ್ಮಿಕೊಂಡಿದೆ.