ಸನ್ಮಾರ್ಗ ವಾರ್ತೆ
ಹರೇಹಳ್ಳಿ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಅರೇಹಳ್ಳಿ ಘಟಕದ ವತಿಯಿಂದ ನವೆಂಬರ್ 2ರಂದು ಹರೇಹಳ್ಳಿಯ ಹಿರಾ ಸೆಂಟರ್ನಲ್ಲಿ ಹಿಜಾಮಾ (ಕಪ್ಪಿಂಗ್) ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ 60ಕ್ಕೂ ಅಧಿಕ ಮಂದಿ ಹಿಜಾಮಾ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಂಡರು.
ಪುರುಷರಿಗೆ ಮಂಡ್ಯದ HRS ಸದಸ್ಯರಾದ ಡಾ. ಇಬಾದುರ್ ರಹ್ಮಾನ್ ಹಾಗೂ ಅರೇಹಳ್ಳಿಯ ಇಮಾದ್ ಅಹ್ಮದ್ ಅವರು ಹಿಜಾಮಾ ಸೇವೆ ನೀಡಿದರು. ಮಹಿಳೆಯರಿಗೆ ಡಾ. ಸಮ್ರಾ ಹಾಗೂ HRS ಸದಸ್ಯೆಯರಾದ ಜವೇರಿಯಾ ಪಿಜಾ, ನಿಮ್ರಾ ಮತ್ತು ಆಯಿಷಾ ಅವರು ಸೇವೆ ಸಲ್ಲಿಸಿದರು.
ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಲಭ್ಯದ ಸದುಪಯೋಗ ಪಡೆದುಕೊಂಡರು. ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರವು ಉತ್ತಮ ಸ್ಪಂದನೆ ಪಡೆಯಿತು.













