ಸನ್ಮಾರ್ಗ ವಾರ್ತೆ
ತಲೆಯ ಮೇಲೆ ಯಾವಾಗ ಬೇಕಾದರೂ ಬೀಳಬಹುದಾದ ಬಾಂಬ್ ಗಳು,, ಕಣ್ಣಿದುರೇ ಕುಸಿದ ಮನೆಗಳು, ಪ್ರೀತಿ ಪಾತ್ರರ ಅಗಲಿಕೆ ಮತ್ತು ಯುದ್ಧದಿಂದ ಉಂಟಾದ ಗಾಯಗಳ ಹೊರತಾಗಿಯೂ ಗಾಜಾ ಜಗತ್ತಿಗೆ ಬದುಕುಳಿಯುವ ಪಾಠವನ್ನು ರವಾನಿಸಿದೆ.
250 ಮಂದಿ ಯುವಕ ಮತ್ತು ಯುವತಿಯರು ಸಾಮೂಹಿಕವಾಗಿ ಮದುವೆಯಾಗುವ ಮೂಲಕ ಗಾಜಾದ ನೋವಿನಲ್ಲಿಯೂ ನಗುವನ್ನು ತರಿಸಿದರು. ಡ್ರೆಸ್ ಆಫ್ ಜಾಯ್ 3 ಎಂಬ ಶೀರ್ಷಿಕೆಯ ಈ ವಿವಾಹ ಕಾರ್ಯಕ್ರಮವನ್ನು ಗಾಜಾ ನಗರದ ಕರಾವಳಿಯಲ್ಲಿರುವ ಸಿ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ಯುಎಇ ಬೆಂಬಲದೊಂದಿಗೆ ಈ ವಿವಾಹ ಕಾರ್ಯಕ್ರಮ ನಡೆಯಿತು.
ಸಾವಿರಾರು ಜನರು ಮದುವೆಯಾಗಲು ಅರ್ಜಿ ಸಲ್ಲಿಸಿದರು. 11622 ಅರ್ಜಿಗಳು ಬಂದಿದ್ದು ಮೊದಲ ಹಂತದಲ್ಲಿ 1335 ಅರ್ಹರನ್ನು ಆಯ್ಕೆ ಮಾಡಲಾಯಿತು. ನಂತರ ಅದೃಷ್ಟಶಾಲಿ 250 ವಧು-ವರರನ್ನು ಆಯ್ಕೆ ಮಾಡಲು ಡ್ರಾ ಎತ್ತಲಾಯಿತು.
ವಧುಗಳು ಸಾಂಪ್ರದಾಯಿಕ ಫೆಲಸ್ತೀನಿಯನ್ ಕಸೂತಿ ವಿನ್ಯಾಸಗಳನ್ನು ಹೊಂದಿರುವ ಸುಂದರವಾದ ಉಡುಪುಗಳನ್ನು ಧರಿಸಿ ಸಮಾರಂಭಕ್ಕೆ ಬಂದರು . ವರರು ಹೂವುಗಳು ಮತ್ತು ಫೆಲಸ್ತೀನಿ ಧ್ವಜಗಳಿಂದ ಅಲಂಕರಿಸಲ್ಪಟ್ಟ ವಾಹನಗಳಲ್ಲಿ ಆಗಮಿಸಿದರು.
ಹೆಚ್ಚಿನ ದಂಪತಿಗಳು ಯುದ್ಧದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡವರಾಗಿದ್ದಾರೆ.












