ಸನ್ಮಾರ್ಗ ವಾರ್ತೆ
ಇನ್ನು 5 ವರ್ಷಗಳು ಕಳೆದರೆ ದುಬೈಗೆ ಪಾಸ್ಪೋರ್ಟ್ ಇಲ್ಲದೆ ಪ್ರಯಾಣಿಸಬಹುದು ಎಂದು ದುಬೈ ವಿಮಾನ ನಿಲ್ದಾಣಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಲ್ ಗ್ರಿಫಿಟ್ಸ್ ಹೇಳಿದ್ದಾರೆ.
ದುಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲವು ಭಾಗಗಳಲ್ಲಿ ಈಗಾಗಲೇ ಪ್ರಯಾಣಿಕರ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಬೋರ್ಡಿಂಗ್ ಪಾಸ್ ನ ಕೆಲಸವನ್ನು ಮಾಡಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಪಾಸ್ಪೋರ್ಟ್ ಇಲ್ಲದೆ ದುಬೈ ವಿಮಾನ ನಿಲ್ದಾಣದಲ್ಲಿ ನಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ದುಬೈ ಇಂಟರ್ನ್ಯಾಷನಲ್ ಟರ್ಮಿನಲ್ ಮೂರರ ಉದ್ದಕ್ಕೂ 200 ಕ್ಕಿಂತಲೂ ಹೆಚ್ಚು ಬಯೋಮೆಟ್ರಿಕ್ ಕ್ಯಾಮೆರಾ ಗಳನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಚೆಕ್ ಇನ್ ವಲಸೆ ಲಾಂಚ್ ಮತ್ತು ಬೋರ್ಡಿಂಗ್ ಪಾಯಿಂಟ್ ಗಳಲ್ಲಿ ಮುಖ ಗುರುತಿಸುವಿಕೆಯನ್ನು ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.












