ಸೌದಿ ಅಪಘಾತ: ಎಂಟು ಮಂದಿ ಮೃತ್ಯು

0
3

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಸಂಭವಿಸಿದ್ದ ಎರಡು ಬಸ್ ಅಪಘಾತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಅಲ್ಕಾಸಿಂ ಪ್ರಾಂತ್ಯ ಮತ್ತು ಝುಲ್ಫಿ ಹೇಲ್ ರಸ್ತೆಯಲ್ಲಿ ಈ ಅಪಘಾತಗಳು ಸಂಭವಿಸಿವೆ.

ಅಲ್ ಕಾಸಿಂ ಪ್ರಾಂತ್ಯದಲ್ಲಿ ನಡೆದ ಬಸ್ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಸಂಚಾರ ಇಲಾಖೆ ತಿಳಿಸಿದೆ.

ಝುಲ್ಫಿ ಹೇಲ್ ರಸ್ತೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ನಾಲ್ಕು ಮಂದಿ ಸೌದಿ ಮಹಿಳೆಯರು ಸಾವನ್ನಪ್ಪಿದ್ದಾರೆ. ಝುಲ್ಫಿಯಲ್ಲಿರುವ ಇಮಾಮ್ ಫೈಝಲ್ ಬಿನ್ ತುರ್ಕಿ ಮಸೀದಿಯಲ್ಲಿ ಇವರ ಅಂತ್ಯಕ್ರಿಯೆ ನಡೆದಿದೆ.