ಚೆನ್ನೈ, ಆ. 6: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಪ್ರಜಾಪ್ರಭುತ್ವ ವಿರುದ್ಧ ದಾಳಿಯೆಂದು ಮಕ್ಕಳ್ ನೀತಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ. ಪಾರ್ಲಿಮೆಂಟಿನಲ್ಲಿ ಚರ್ಚಿಸದೆ ಸದನದ ಬಹುಮತದ ಆಧಾರದಲ್ಲಿ ಕೇಂದ್ರ ಸರಕಾರ ಇಂತಹ ತೀರ್ಮಾನವನ್ನು ತಳೆದಿದೆ. ಸಂವಿಧಾನದ 370, 35 ಎ ವಿಧಿಗೆ ಐತಿಹಾಸಿಕ ಮಹತ್ವವಿದೆ.
ಕಳೆದ ಬಾರಿ ನೋಟು ನಿಷೇಧ, ಈ ಬಾರಿ ಆರ್ಟಿಕಲ್ 370 ತೆರವು ಮುಂತಾದ ಸರ್ವಾಧಿಕಾರಿ ಕ್ರಮಗಳನ್ನು ಬಿಜೆಪಿ ಸರಕಾರ ಕೈಗೊಂಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧಿ ಧ್ವನಿಯನ್ನು ದಮನಿಸುವ ಸರಕಾರದ ಏಕಪಕ್ಷೀಯ ನಿರ್ಧಾರವನ್ನು ಬಲವಾಗಿ ವಿರೋಧಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.












