ಅಯೋಧ್ಯೆ ಪ್ರಕರಣ: ಇಂದಿನಿಂದ ದಿನಾಲೂ ವಿಚಾರಣೆ

0
534

ಹೊಸದಿಲ್ಲಿ, ಆ. 6: ಅಯೋಧ್ಯೆಯ ಬಾಬರಿ ಮಸೀದಿ ವಿವಾದ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇಂದಿನಿಂದ ಸುಪ್ರೀಂಕೋರ್ಟು ದಿನಾಲೂ ವಾದ ಆಲಿಸಲಿದೆ. ಐವರು ಸದಸ್ಯರ ಸುಪ್ರೀಂಕೋರ್ಟು ಪೀಠ ವಾದವನ್ನು ಆಲಿಕೆ ಮಾಡಲಿದೆ. ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ಮಧ್ಯಸ್ಥಿಕೆಗೆ ಸಮಿತಿ ರೂಪಿಸಿ ಕೋರ್ಟಿನ ಹೊರಗೆ ರಾಜಿಯಲ್ಲಿ ಪಕರಣವನ್ನು ಮುಗಿಸಿಕೊಳ್ಳಲು ಸೂಚಿಸಿತ್ತು. ಆದರೆ ನಾಲ್ಕೂವರೆ ತಿಂಗಳವರೆಗೆ ಹಿಂದೂ-ಮುಸ್ಲಿಂ ಆಧ್ಯಾತ್ಮಿಕ ನಾಯಕರು ಚರ್ಚಿಸಿದರೂ ವಿಫಲವಾಗಿತ್ತು. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲು ತಮ್ಮಿಂದ ಸಾಧ್ಯವಿಲ್ಲ ಎಂದು ಮಧ್ಯಸ್ಥಿಕೆ ಸಮಿತಿ ಸುಪ್ರೀಂಕೋರ್ಟಿಗೆ ವರದಿ ನೀಡಿತ್ತು. 2010ರಿಂದ ಅಯೋಧ್ಯೆ ಪ್ರಕರಣ ಸುಪ್ರೀಂಕೋರ್ಟಿನ ಮುಂದಿದೆ.

ಮುಸ್ಲಿಮರು, ನಿರ್ಮೋಹಿ ಅಖಾಡ ಮತ್ತು ಹಿಂದೂಗಳಿಗೆ ಜಮೀನನ್ನು ಮೂರು ಪಾಲನ್ನಾಗಿ ವಿಭಜಿಸಿ ಕೊಡಬೇಕೆನ್ನುವ ಆಲಹಾಬಾದ್ ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮರು ಮತ್ತು ಹಿಂದೂ ಸಂಘಟನೆಗಳು ಸುಪ್ರೀಂಕೋರ್ಟಿನ ಕದತಟ್ಟಿವೆ.