ಬಕ್ರೀದ್: ಗೋ ಸಾಗಾಟದ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರನ್ನು ಸಹಿಸುವುದಿಲ್ಲ; ದ ಕ ಜಿಲ್ಲಾಧಿಕಾರಿ

0
2392

ಮಂಗಳೂರು: ಮುಂದಿನ ವಾರ ಮುಸ್ಲಿಮರ ಹಬ್ಬವಾದ ಬಕ್ರೀದ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದ ಕ ಜಿಲ್ಲಾಡಳಿತವು ಚುರುಕಾಗಿದೆ. ಜಾನುವಾರು ಬಲಿ ನೀಡುವ ಹಬ್ಬವಾಗಿ ಗುರುತಿಸಿಕೊಂಡಿರುವ ಬಕ್ರೀದ್ ಹಬ್ಬದ ಸಮಯದಲ್ಲಿ ಗೋ ಸಾಗಾಟದ ಹೆಸರಲ್ಲಿ ಯಾರಾದರೂ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನ ನಡೆಸಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಎಚ್ಚರಿಕೆ ನೀಡಿದ್ದಾರೆ.

ದ ಕ ಜಿಲ್ಲೆಯಲ್ಲಿ ಈ ಬಾರಿ ಬಕ್ರೀದ್ ಹಬ್ಬವು ಸೌಹಾರ್ದತೆಯಿಂದ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ. ಅಕ್ರಮ ಗೋ ಸಾಗಾಟದ ಬಗ್ಗೆ ಸಂದೇಹವಿದ್ದರೆ 1077 ಮತ್ತು 100 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದೇ ಹೊರತು ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಬಕ್ರೀದ್ ನ ಸಮಯದಲ್ಲಿ ಗೋ ಸಾಗಾಟದ ಸಮಸ್ಯೆಗಳಿದ್ದರೆ ಆ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಾದ ನಾವಿದ್ದೇವೆ. ನಮ್ಮನ್ನು ಮೀರಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅದನ್ನು ಸಹಿಸಲಾರೆವು ಎಂದವರು ಎಚ್ಚರಿಕೆ ನೀಡಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.