ಭಾರತದ ಎಲ್ಲ ಹಾಜಿಗಳು ಮಕ್ಕದಲ್ಲಿ: ಜನಸಾಗರದಿಂದ ತುಂಬಿಕೊಂಡಿರುವ ಹರಮ್

0
1215

ಮಕ್ಕ, ಆ. 7: ಪವಿತ್ರ ಹಜ್ ದಿನಗಳು ಸಮೀಪಿಸಿದ್ದು ಹಾಜಿಗಳು ಮಂಗಳವಾರ ರಾತ್ರೆ ಮಿನಾ ಕಣಿಯಲ್ಲಿ ಹಾಕಲಾದ ಡೇರೆಗೆ ಹೊರಟಿದ್ದಾರೆ. ಅಲ್ಲಿ ರಾತ್ರೆ ತಂಗಿ ಹಜ್‍ನ ಪ್ರಧಾನ ಕರ್ಮಗಳನ್ನು ಅನುಷ್ಠಾನಿಸಲಿದ್ದಾರೆ. ಶುಕ್ರವಾರ ಹಗಲು ಮಿನಾದಲ್ಲಿರಲಿದ್ದಾರೆ. ಪ್ರಧಾನ ಕರ್ಮವಾದ ಅರಫಾ ಸಂಗಮ ಶನಿವಾರ ನಡೆಯಲಿದೆ. ಅಂದು ಬೆಳಗ್ಗಿನಿಂದ ಅರಫಾಕ್ಕೆ ಹೊರಡುವರು. ಭಾರತದ ಎಲ್ಲ ಹಾಜಿಗಳು ಮಕ್ಕಕ್ಕೆ ತಲುಪಿದ್ದಾರೆ.

ಮಸ್ಚಿದುಲ್ ಹರಂ ಜನಸಾಗರದಿಂದ ತುಂಬಿಕೊಂಡಿದೆ. ಕೊನೆಗೆ ಬಂದು ತಲುಪುವ ಹಾಜಿಗಳಿಗೆ ಉಮ್ರಾ ನಿರ್ವಹಿಸಲು ಸೌಕರ್ಯ ಆಗುವಂತೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಭಾರತದ ಹಾಜಿಗಳು ವಾಸಿಸುವ ಅಝೀಝಿಯದಿಂದ ಹರಮ್‍ಗೆ ಬಸ್ ಸರ್ವಿಸ್ ಸ್ಥಗಿತಗೊಳಿಸಲಾಗಿದೆ. ಇನ್ನು ಎಲ್ಲರೂ ವಾಸಸ್ಥಳದಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಹಜ್ ಕರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ಯಾತ್ರೆಯ ಕುರಿತು ಕೊನೆಯ ಹಂತದ ತರಗತಿಗಳನ್ನು ನೀಡಲಾಗುತ್ತದೆ. ಹಜ್ ಸರ್ವಿಸ್ ಕಂಪೆನಿಗಳು ಹಾಜಿಗಳಿಗೆ ಇಲಕ್ಟ್ರಾನಿಕ್ ಬಳೆಗಳು ಮತ್ತು ಕೂಪನ್‍ಗಳನ್ನು ವಿತರಿಸಲು ತೊಡಗಿದ್ದಾರೆ. ಇನ್ನು ಕಂಪೆನಿಗಳ ಜವಾಬ್ದಾರಿಯಲ್ಲಿ ಹಾಜಿಗಳು ಇರಲಿದ್ದಾರೆ.