ಮಾನಸ ಸರೋವರ ಯಾತ್ರಾ ತಂಡಕ್ಕೆ ಚೀನಾದಿಂದ ತಗಾದೆ: ಲಢಾಕನ್ನು ಕೇಂದ್ರಾಡಳಿತ ಪ್ರದೇಶ ಮಾಡಿದುದಕ್ಕೆ ಸಿಟ್ಟು

0
542

ಹೊಸದಿಲ್ಲಿ, ಆ. 8: ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಗೆ ಹೊರಟ ಭಾರತದ ಯಾತ್ರಾ ತಂಡಕ್ಕೆ ಚೀನ ಅನುಮತಿ ನಿಷೇಧಿಸಿದೆ ಎಂದು ವರದಿಯಾಗಿದೆ.

ಗಡಿಗೆ ಸೇರಿದ ಲಡಾಕನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದದು ಚೀನದ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಭಾರತ-ಚೀನ ಗಡಿಯ ಪಶ್ಚಿಮಭಾಗದಲ್ಲಿ ಚೀನದ ಪ್ರದೇಶದಲ್ಲಿ ಭಾರತ ನಡೆಸುವ ಹಸ್ತಕ್ಷೇಪಗಳನ್ನು ನಾವು ಕೆಲವು ಸಲ ಪ್ರತಿರೋಧಿಸಿದೆವು ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಹ್ಯೂವ ಚುನಿಂಗ್ ಹೇಳಿದರು. ಆ ನೀತಿಯಲ್ಲಿ ಬದಲಾವಣೆಗಳಿಲ್ಲ. ಭಾರತದ ಆಂತರಿಕ ಕಾನೂನಿನ ಬದಲಾವಣೆಯು ಚೀನದ ಗಡಿಯ ಸಾರ್ವಭೌಮತ್ವವನ್ನು ಸಂಕುಚಿತಗೊಳಿಸಿದೆ. ಲಡಾಕ್ ಕ್ಷೇತ್ರದಲ್ಲಿ ಚೀನದ ಹಕ್ಕು ವಾದ ಇತ್ತೀಚೆಗೆ ಕೇಳಿ ಬಂದಿಲ್ಲ. ಆದ್ದರಿಂದ ಚೀನದ ನಿಲುವನ್ನು ಭಾರತ ಶಕ್ತವಾಗಿ ತಳ್ಳಿಹಾಕಿದೆ ಮತ್ತು ಲಡಾಕ್ ಕೇಂದ್ರಾಳಿತ ಪ್ರದೇಶವನ್ನಾಗಿ ಮಾಡುವುದು ಭಾರತದ ಆಂತರಿಕ ಕಾರ್ಯವೆಂದು ವಿದೇಶ ವಕ್ತಾರ ರವೀಶ್ ಕುಮಾರ್ ಹೇಳಿದರು.

ಭಾರತ-ಚೀನ ಗಡಿಯ ಸಮಸ್ಯೆಗಳು ಉಭಯ ದೇಶಗಳಿಗೆ ಸ್ವೀಕಾರಾರ್ಹವಾಗುವ ರೀತಿಯಲ್ಲಿ ರಾಜಕೀಯವಾಗಿ ಪರಿಹರಿಸುವ ಅಭಿಪ್ರಾಯ ಕೇಳಿ ಬರುತ್ತಿತ್ತು. ಈಗಿನ ಬೆಳವಣಿಗೆಯ ಹೊರತಾಗಿಯೂ ಗಡಿಯಲ್ಲಿ ಶಾಂತಿ ಉಳಿಸಿಕೊಳ್ಳಲು ಚೀನ, ಭಾರತ ಒಪ್ಪಿಕೊಂಡಿವೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.