ಹುವೈಯ್ ವಿರುದ್ಧ ನಿಷೇಧ ಹೇರಿದರೆ ನಿಮ್ಮ ಸಂಸ್ಥೆಗಳ ಮೇಲೆ ನಿಷೇಧ ಹೇರುವೆವು- ಭಾರತಕ್ಕೆ ಚೀನಾ ಧಮಕಿ

0
708

ಹೊಸದಿಲ್ಲಿ,ಆ. 8: ಚೈನೀಸ್ ಮೊಬೈಲ್ ಕಂಪೆನಿಯಾದ ಹುವೈಯ್ ಟೆಕ್ನಾಲಜಿಸ್ ನ ವ್ಯಾಪಾರಕ್ಕೆ ಅಡ್ಡಿಪಡಿಸಬಾರದೆಂದು ಚೀನ ಭಾರತದೊಂದಿಗೆ ಆಗ್ರಹಿಸಿದೆ. ಹುವೈಯ್ ನಿಷೇಧದ ಕ್ರಮದೊಂದಿಗೆ ಮುಂದೆ ಸಾಗಿದರೆ ಚೀನದಲ್ಲಿರುವ ಭಾರತದ ಸಂಸ್ಥೆಗಳು ಅದರ ಫಲವನ್ನು ಎದುರಿಸಬೇಕಾದೀತು ಎಂದು ಚೀನ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.

ಜಗತ್ತಿನಾದ್ಯಂತ ಇರುವ 5ಜಿ ಮೊಬೈಲ್ ನಿರ್ಮಾಣದಿಂದ ಹುವೈಯ್‍ ಅನ್ನು ತಡೆಯುವ ಕುರಿತ ಅಮೆರಿಕದ ಪ್ರಚಾರದ ಕುರಿತು ತನ್ನ ಆತಂಕವನ್ನು ಜುಲೈ 10ರಂದು ಬೀಜಿಂಗ್‍ನ ಭಾರತ ರಾಯಭಾರಿ ವಿಕ್ರಂ ಮಿಶ್ರರಿಗೆ ಚೀನದ ವಿದೇಶ ಸಚಿವಾಲಯ ತಿಳಿಸಿತ್ತು. ಅಮೆರಿಕದ ಒತ್ತಡಕ್ಕೆ ಮಣಿದು ಹುವೈಯ್ ವಿರುದ್ಧ ಭಾರತ ಕ್ರಮ ಜರಗಿಸಿದರೆ ಚೀನದಲ್ಲಿ ವ್ಯಾಪಾರ ನಡೆಸುವ ಭಾರತದ ಸಂಸ್ಥೆಗಳ ಮೇಲೆ ದಿಗ್ಬಂಧ ಹೇರಲಾಗುವುದು ಎಂದು ಚೀನದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಭಾರತದ ವಿದೇಶ ಸಚಿವಾಲಯ ಪ್ರತಿಕ್ರಿಯೆ ಸೂಚಿಸಿಲ್ಲ. ಇನ್‍ಫೋಸಿಸ್, ಟಿಸಿಎಸ್. ಡಾ.ರೆಡ್ಡೀಸ್ ಲ್ಯಾಬರೊಟರೀಸ್, ರಿಲಯನ್ಸ್ ಇಂಡಸ್ಟ್ರೀಸ್, ಮಹಿಂದ್ರಾ ಆಂಡ್ ಮಹಿಂದ್ರಾ ಕಂಪೆನಿಗಳ ಸಹಿತ ಹಲವು ಕಂಪೆನಿಗಳು ಚೀನದಲ್ಲಿ ವ್ಯಾಪಾರ ವಹಿವಾಟು ಹೊಂದಿವೆ.