ಇನ್ಫೋಸಿಸ್ ಸಯನ್ಸ್ ಫೌಂಡೇಶನ್ ಪ್ರಶಸ್ತಿ ವಿಜೇತ ಪ್ರೊ.ಶಂನಾದ್ ಬಶೀರ್ ಮೃತಸ್ಥಿತಿಯಲ್ಲಿ ಪತ್ತೆ: ಪ್ರಮುಖ ವಕೀಲ, ಆಕ್ಟಿವಿಸ್ಟ್, ಪ್ರೊಫೆಸರ್ ಗೆ ಏನಾಯಿತು?

0
863

ಬೆಂಗಳೂರು, ಎ. 9: ಪ್ರಮುಖ ವಕೀಲ, ಆಕ್ಟಿವಿಸ್ಟ್, ಪ್ರೊಫೆಸರ್ ಶಂನಾದ್ ಬಶೀರ್ ಚಿಕ್ಕಮಗಳೂರಿನಲಲಿ ಕಾರಿನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಜುಲೈ 28ಕ್ಕೆ ಬಾಬಾ ಬುಡನ್‍ಗಿರಿಗೆ ಹೋಗಿದ್ದರು. ನಂತರ ಕೆಲವು ದಿವಸಗಳ ಕಾಲ ಅವರ ಕುರಿತು ವಿವರಗಳು ದೊರೆಯಲಿಲ್ಲ ಎಂದು ಗೆಳೆಯರು ದೂರು ನೀಡಿದ ಬಳಿಕ ಪೊಲೀಸರು ಹುಡಕಾಡಿದ್ದು ಅವರು ಕಾರಿನೊಳಗೆ ಮೃತದೇಹವನ್ನು ಪತ್ತೆಹಚ್ಚಿದರು. ಕೆಟ್ಟ ಹವಾಮಾನದಿಂದಾಗಿ ಅವರು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಶುಕ್ರವಾರ ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಹುಟ್ಟೂರು ಕೇರಳಕ್ಕೆ ಮೃತದೇಹವನ್ನು ಸಾಗಿಸಲಾಗುತ್ತದೆ.

2008ರಿಂದ ಅವರು ಪಶ್ಚಿಮಬಂಗಾಳ ನ್ಯಾಶನಲ್ ಯುನಿವರ್ಸಿಟಿಯಲ್ಲಿ ಜ್ಯೂರಿಡಿಕಲ್ ಸೈನ್ಸ್ ಪ್ರೊಫೆಸರ್ ಹಾಗೂ ಆಕ್ಸ್ ಫರ್ಡ್ ಇಂಟಲಕ್ಚಿವಲ್ ಪ್ರಪರ್ಟಿ ರಿಸರ್ಚ್ ಸೆಂಟರ್ ನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿದ್ದಾರೆ. ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಇಂಗ್ಲೆಂಡಿನ ಆಕ್ಸಫರ್ಡ್ ಯುನಿವರ್ಸಿಟಿಯಿಂದ ಎಂಫಿಲ್ ಪಡೆದುಕೊಂಡಿದ್ದಾರೆ. ಕ್ಯಾನ್ಸರ್ ಔಷಧದ ಪೇಟೆಂಟ್ ಗಳಿಸಲು ಸ್ವಿಸ್ ಕಂಪೆನಿ ನೊವಾರ್ಟಿಸ್ ಯತ್ನಿಸಿದಾಗ ಅದರ ವಿರುದ್ಧ ಕಾನೂನು ಹೋರಾಟದ ಮೂಲಕ ಶಂನಾದ್ ಪ್ರಸಿದ್ಧರಾಗಿದ್ದರು. 2014ರಲ್ಲಿ ಇವರಿಗೆ ಇನ್ಫೋಸಿಸ್ ಸಯನ್ಸ್ ಫೌಂಡೇಶನ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಮ್ಯಾನೇಜಿಂಗ್ ಇಂಟಲಕ್ಚುವಲ್ ಪ್ರೊಪರ್ಟಿ ಮ್ಯಾಗಝಿನ್ ಹೆಸರಿಸಿದ ಅಂತಾರಾಷ್ಟ್ರ ಮಟ್ಟದ ಆಯ್ದ 50 ಮಂದಿ ಗ್ಲೋಬಲ್ ಐಪಿ ಲೀಡರ್ಸ್‍ಗಳಲ್ಲಿ ಶಂನಾದ್ ಒಬ್ಬರು. ನಂತರ ಐಡಿಐಎ ಎಂಬ ಸಂಘಟನೆಯನ್ನು ಸ್ಥಾಪಿಸಿ ಹಲವಾರು ಬಡ ವಿದ್ಯಾರ್ಥಿಗಳನ್ನು ಕಾನೂನು ಕ್ಷೇತ್ರಕ್ಕೆ ಬರುವಂತೆ ಮಾಡಿದ್ದರು.