ಮಂಗಳೂರು ನಗರದ ಹೆಚ್ಚಿನ ರಸ್ತೆಗಳಲ್ಲಿ, ವಾಹನಗಳು ಚಲಿಸಲು ಸಂಕಷ್ಟ ಪಡುವ ರೀತಿಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಅದರಲ್ಲೂ ನಗರದ ಮುಖ್ಯ ದಾರಿಗಳಾದ ಲೇಡಿಗೋಷನ್ ರಸ್ತೆ, ಮಾರ್ಕೆಟ್ ರಸ್ತೆ, ಹಂಪನಕಟ್ಟೆ ರಸ್ತೆಗಳಲ್ಲಿ ಹೆಚ್ಚು ಹೊಂಡಗಳಾಗಿವೆ. ಈ ರಸ್ತೆಗಳಲ್ಲಿ ಸಾರ್ವಜನಿಕ ಬಸ್ಸು, ರಿಕ್ಷಾ, ದ್ವಿಚಕ್ರ ವಾಹನಗಳು ಸಂಚರಿಸಲು ಪರದಾಡಬೇಕಾಗಿ ಬರುತ್ತಿದೆ.
ಹಾಗೆಯೇ ಸ್ಮಾರ್ಟ್ ಸಿಟಿ ಯೋಜನೆಯ ಚರಂಡಿ ಅಗೆತದ ಬಳಿಕ ಸರಿಯಾದ ಡಾಂಬರೀಕರಣ ಮಾಡದ ಕಾರಣ, ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆ, ಮುಹಮ್ಮದಲಿ ರಸ್ತೆಗಳು ಸೇರಿದಂತೆ, ಎಲ್ಲೆಲ್ಲ ರಸ್ತೆಯ ಮಧ್ಯದಲ್ಲಿಯೇ ಚರಂಡಿ ಅಗೆಯಲಾಗಿದೆಯೋ ಅಲ್ಲೆಲ್ಲಾ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿವೆ. ಮಳೆಗಾಲದಲ್ಲಂತೂ ಈ ರಸ್ತೆಗಳು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ನರಕ ದರ್ಶನವನ್ನು ಮಾಡಿಸುತ್ತಿದೆ.
ಆದ್ದರಿಂದ, ಮಳೆಯು ಕಡಿಮೆಯಾದ ಕೂಡಲೇ ದುರಸ್ಥಿಗೊಳಿಸುವ ಕ್ರಮ ಕೈಗೊಳ್ಳಲು, ತಮ್ಮ ಅಧೀನದಲ್ಲಿರುವ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಬೇಕೆಂದು, ಮಾನ್ಯ ಜಿಲ್ಲಾಡಳಿತಕ್ಕೆ ಇಂದು ವೆಲ್ಫೇರ್ ಪಾರ್ಟಿ, ಮಂಗಳೂರು ವಲಯವು ಮನವಿ ಮಾಡಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ಫರಾಝ್ ಅಡ್ವೋಕೇಟ್, ಮಂಗಳೂರು ವಲಯಾಧ್ಯಕ್ಷ S.M. ಮುತ್ತಲಿಬ್, ಉಪಾಧ್ಯಕ್ಷ ಮುಹಮ್ಮದಲಿ, ಮಾಧ್ಯಮ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್, ವೆಲ್ಫೇರ್ ನೇಶನ್ ನ ಜಿಲ್ಲಾ ಸಂಚಾಲಕ ಮುಹಮ್ಮದ್ ತಫ್ಲೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.












