ಬೀಜಿಂಗ್, ಆ. 13: ಕಾಶ್ಮೀರ ವಿಷಯದಲ್ಲಿ ಚೀನ ವಿದೇಶ ಸಚಿವ ವಾಂಗ್ ಯಿ ಭಾರತಕ್ಕೆ ತನ್ನ ಆತಂಕವನ್ನು ವ್ಯಕ್ತಪಡಿಸಿದ್ದು ಸೋಮವಾರ ಭಾರತ ವಿದೇಶ ಸಚಿವ ಎಸ್.ಜೈಶಂಕರ್ರೊಂದಿಗೆ ನಡೆಸಿದ ಭೇಟಿಯ ವೇಳೆ ಚೀನ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿತ್ತು. ಈಗ ಭಾರತ, ಪಾಕಿಸ್ತಾನಗಳ ನಡುವಿನ ವಿವಾದದಲ್ಲಿ ಚೀನ ತೀವ್ರ ಆತಂಕವನ್ನು ಸೂಚಿಸಿದೆ.
ಸಮಸ್ಯೆಯೇನಿದ್ದರೂ ಶಾಂತವಾಗಿ ಪಾಕಿಸ್ತಾನ, ಭಾರತ ಬಗೆಹರಿಸಿಕೊಳ್ಳಬೇಕು. ಕಾಶ್ಮೀರದಿಂದ 370ನೇ ವಿಧಿ ರದ್ದುಪಡಿಸಿದ ಕ್ರಮ ವಲಯದ ಚೀನದ ಹಕ್ಕು, ಹಿತಾಸಕ್ತಿಗಳಿಗೂ ಬಾಧಕವಾಗಬಹುದೇ ಎನ್ನುವ ಆತಂಕವನ್ನು ವಾಂಗ್ ಯಿ ಜೈಶಂಕರ್ ಗೆ ತಿಳಿಸಿದರು. ಇದೇ ವೇಳೆ ಜಮ್ಮುಕಾಶ್ಮೀರದ 370ನೆ ವಿಧಿ ರದ್ದು ಪಡಿಸಿದರೂ ಗಡಿ ವಿಚಾರದಲ್ಲಿ ಬದಲಾವಣೆಗಳಿಲ್ಲ ಎಂದು ವಿದೇಶ ಸಚಿವ ಜೈಶಂಕರ್ ವಾಮಗ್ಯಿಗೆ ತಿಳಿಸಿದರು. ಪಾಕಿಸ್ತಾನದೊದಿಗೆ ಕದನ ವಿರಾಮ ಮುಂದುವರಿಯಲಿದೆ ಎಂದು ಕೂಡ ಅವರು ಚೀನದ ವಿದೇಶ ಸಚಿವರಿಗೆ ಭರವಸೆ ನೀಡಿದರು.












