ಮತ್ತೆ ಆಪರೇಷನ್ ಕಮಲ: ಸಿಕ್ಕಿಂನಲ್ಲಿ ಡೆಮಕ್ರಾಟಿಕ್ ಫ್ರಂಟ್‍ನ 10 ಶಾಸಕರು ಬಿಜೆಪಿಗೆ

0
483

ಹೊಸದಿಲ್ಲಿ, ಆ. 13: ಸಿಕ್ಕಿಂ ಡೆಮಕ್ರಾಟ್ ಫ್ರಂಟ್ (ಎಸ್‍ಡಿಎಫ್)ನ ಹತ್ತು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‍ ಮಾಧವ್ ನೇತೃತ್ವದಲ್ಲಿ ಎಲ್ಲ ಶಾಸಕರು ಬಿಜೆಪಿಯ ಸದಸ್ಯತ್ವವವನ್ನು ಸ್ವೀಕರಿಸಲಿದ್ದಾರೆ. ಬಹುಸುದೀರ್ಘ ಸಮಯದಿಂದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಪವನ್ ಚಮಲಿಂಗ್‍ರ ಪಾರ್ಟಿ ಈ ಸಲದ ಲೋಕಸಭಾ ಚುನಾವಣೆಯ ಜೊತೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾಗಿದ್ದು ಹದಿನೈದು ಶಾಸಕರ ಜೊತೆ ವಿಪಕ್ಷದಲ್ಲಿದೆ. ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ ಹದಿನೇಳು ಸೀಟುಗಳೊಂದಿಗೆ ಅಧಿಕಾರಕ್ಕೆ ಬಂದಿದ್ದು ಪ್ರೇಮ್ ಸಿಂಗ್ ತಮಾಂಗ್ ಮುಖ್ಯಮಂತ್ರಿಯಾಗಿದ್ದಾರೆ.

ಚಮ್‍ಲಿಂಗ್ ಐದು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ಚಮ್‍ಲಿಂಗ್ ಎರಡು ಕಡೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಈಗ ಹತ್ತು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.