ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.14: ಉನ್ನಾವ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಜೈಲಿನಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಶಾಸಕ ಕುಲ್ದೀಪ್ ಸೇಂಗರ್ ಮತ್ತು ಇತರ ಹತ್ತು ಮಂದಿಯ ವಿರುದ್ಧ ಆರೋಪ ಹೊರಿಸಲಾಗಿದೆ ಮತ್ತು ಸಂತ್ರಸ್ತೆಯ ತಂದೆ ಹಲ್ಲೆ ಎಸೆಗಿದರು ಹಾಗೂ ಆಯುಧ ಕೈಯಲ್ಲಿರಿಸಿಕೊಂಡಿದ್ದರು ಎಂದು ಸುಳ್ಳು ಕೇಸಿನಲ್ಲಿ ಸಿಲುಕಿಸಿದ್ದಕ್ಕಾಗಿ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮ ಆರೋಪ ಹೊರಿಸಿದ್ದಾರೆ.
ಇದೇವೇಳೆ, ಉನ್ನಾವ ಸಂತ್ರಸ್ತೆಯ ಕುಟುಂಬದ ವಿರುದ್ಧ ಇರುವ 20 ಪ್ರಕರಣಗಳ ಯಥಾಸ್ಥಿತಿಯ ಬಗ್ಗೆ ವರದಿ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ ಆದೇಶಿಸಬೇಕೆಂದು ಸಲ್ಲಿಸಲಾದ ಮನವಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. ರಾಜ್ಯದೊಳಗೆ ಇವರ ವಿರುದ್ಧ ಇರುವ ಇತರ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದು ಜಸ್ಟಿಸ್ ದೀಪಕ್‍ಗುಪ್ತ, ಜಸ್ಟೀಸ್ ಬಿ.ಆರ್.ಗವಾಯಿಯವರನ್ನೊಳಗೊಂಡ ಸುಪ್ರೀಂಕೋರ್ಟು ಪೀಠ ತಿಳಿಸಿದೆ.
ಉನ್ನಾವ್ ಅತ್ಯಾಚಾರ ಪ್ರಕರಣವನ್ನು ಸುಪ್ರೀಂಕೋರ್ಟು ಆಗಸ್ಟ್ 19ಕ್ಕೆ ಪರಿಗಣಿಸಲಿದೆ. ಉತ್ತರಪ್ರದೇಶ ಜೈಲಿನಲ್ಲಿರುವ ಉನ್ನಾವ ಸಂತ್ರಸ್ತೆಯ ಮಾವನ ಸುರಕ್ಷೆಯನ್ನು ಪರಿಗಣಿಸಿ ಸುಪ್ರೀಂಕೋರ್ಟು ಸೂಚನೆಯಂತೆ ತಿಹಾರ್ ಜೈಲಿಗೆ ವರ್ಗಾಯಿಸಲಾಗಿತ್ತು. ಬಿಜೆಪಿಯಿಂದ ಉಚ್ಚಾಟನೆಯಾದ ಬಿಜೆಪಿ ಶಾಸಕ ಕುಲ್ದೀಪ್ ಸೇಂಗರ್ ಮತ್ತು ಸಹೋದರ ಅತುಲ್ ಸಿಂಗ್‍ರು ನೀಡಿದ ಕೇಸಿನಲ್ಲಿ ಸಂತ್ರಸ್ತೆಯ ಮಾವನಿಗೆ ಹತ್ತು ವರ್ಷ ಜೈಲುಶಿಕ್ಷೆಯಾಗಿದೆ. ಹತ್ತೊಂಬತ್ತು ವರ್ಷ ಹಿಂದಿನ ಪ್ರಕರಣದಲ್ಲಿ ಶಿಕ್ಷಿಸಲಾಗಿದೆ.












