ಅಸ್ಸಾಂ ಪೌರತ್ವ ಪಟ್ಟಿ: ಮರುಪರಿಶೀಲಿಸುವ ಪ್ರಶ್ನೇಯೇ ಇಲ್ಲ ಎಂದ ಸುಪ್ರೀಂಕೋರ್ಟು

0
483

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.14: ಆಗಸ್ಟ್ 31ಕ್ಕೆ ಪ್ರಕಟಿಸುವ ಅಸ್ಸಾಂನ ರಾಷ್ಟ್ರೀಯ ಪೌರತ್ವ ಪಟ್ಟಿ ಆಧಾರ್ ಡಾಟದಂತೆ ಸುರಕ್ಷಿತವಾಗಿ ಇರಿಸಬೇಕೆಂದು ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ. ಕೇಂದ್ರ-ರಾಜ್ಯ ಸರಕಾರಗಳಿಗೆ ಮತ್ತು ಎನ್‍ಆರ್‌ಸಿ ಕೋ-ಆರ್ಡಿನೇಟರ್‍ಗಳಿಗೆ ಪರಿಮಿತಿ ನೀಡಬೇಕಿದೆ ಎಂದು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ತಿಳಿಸಿದೆ. ಇದೇ ವೇಳೆ ಅಂತಿಮ ಪೌರತ್ವಪಟ್ಟಿಯನ್ನು ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂಕೋರ್ಟು ಹೇಳಿದೆ.

2004 ಡಿಸೆಂಬರ್ ಮೂರರ ಬಳಿಕ ಜನಿಸಿದ ಮಕ್ಕಳ ತಂದೆ ತಾಯಿಯರ ಪೌರತ್ವದ ಕುರಿತು ಕೇಸು ಇದ್ದರೆ ಮಕ್ಕಳನ್ನು ಪೌರತ್ವ ಪಟ್ಟಿಗೆ ಸೇರಿಸುವುದಿಲ್ಲ. ಪ್ರಕಟಗೊಂಡ ಪಟ್ಟಿಯಿಂದ ಹೊರಗಿರುವವರ ಹೆಸರನ್ನು ಆನ್‍ಲೈನ್ ಮೂಲಕ ಒಮ್ಮೆ ಮಾತ್ರ ಪ್ರಕಟಿಸಲಾಗುವುದು. ಎರಡನೆಯದಾಗಿ ಪಟ್ಟಿಯಲ್ಲಿ ಸೇರಿಸಲಾದವರ ಹೆಸರುಗಳನ್ನು ಹೆಚ್ಚುವರಿ ಪಟ್ಟಿಯಾಗಿ ಜಿಲ್ಲಾಡಳಿತಕ್ಕೆ ನೀಡಬೇಕು. ಈಗಿರುವ ಪಟ್ಟಿಯನ್ನು ಸಂಪೂರ್ಣವಾಗಿ ಮರುಪರಿಶೀಲನೆ ನಡೆಸಲಾಗುವುದಿಲ್ಲ. ಟ್ರಿಬ್ಯೂನಲ್ ವಿದೇಶಿಗಳೆಂದು ಘೋಷಿಸಿದರೆ ಅದರ ವಿರುದ್ಧ ಸಲ್ಲಿಕೆಯಾಗುವ ಮೇಲ್ಮನವಿಯನ್ನು ಗುವಾಹಟಿ ಹೈಕೋರ್ಟು ಪರಿಗಣಿಸಲಿದೆ.