ಟ್ರಿಪ್ ಹೋಗಲು ನಿರಾಕರಿಸಿದ 918 ಆಟೋಚಾಲಕರ ಲೈಸನ್ಸ್ ರದ್ದು

0
604

ಮುಂಬೈ,ಆ.16: ಟ್ರಿಪ್ ಹೋಗಲು ನಿರಾಕರಿಸಿದ 918 ಆಟೋರಿಕ್ಷಾ ಚಾಲಕರ ಲೈಸನ್ಸನ್ನು ಮಹಾರಾಷ್ಟ್ರ ಸಾರಿಗೆ ವಿಭಾಗ ರದ್ದುಪಡಿಸಿ ಆದೇಶ ಹೊರಡಿಸಿದೆ. ಮುಂಬೈ ಮತ್ತು ಸಮೀಪದ ನಗರ ಥಾಣೆಯ ಆಟೋ ರಿಕ್ಷಾ ಚಾಲಕರು ಲೈಸೆನ್ಸ್ ಕಳೆದು ಕೊಂಡಿದ್ದಾರೆ. ಆಟೋ ಚಾಲಕರ ವಿರುದ್ಧ ಮಹಾರಾಷ್ಟ್ರದಲ್ಲಿ ಇದೇ ಮೊದಲ ಸಲ ಇಂತಹ ಕ್ರಮಕೈಗೊಳ್ಳಲಾಗಿದೆ. ಸಾರಿಗೆ ಕಮೀಶನರ್ ಶೇಖರ್ ಚನ್ನೆ ಈ ಕ್ರಮದ ಹಿಂದಿನ ರೂವಾರಿ ಎನ್ನಲಾಗುತ್ತಿದೆ. ಮುಂಬೈನಂತಹ ಮಹಾನಗರದಲ್ಲಿ ಅತ್ಯವಶ್ಯಕ ಸಮದಯಲ್ಲಿ ಆಟೊ ಕರೆದರೆ ಚಾಲಕರು ಹೋಗಲು ಸಿದ್ಧರಾಗದಿರುವುದು ಪ್ರಯಾಣಿಕರೆಗೆ ಹೆಚ್ಚು ಕಷ್ಟವನ್ನು ಉಂಟು ಮಾಡುತ್ತದೆ. ಮುಂಬೈಯ ಕುರ್ಲಾ, ಬಾಂದ್ರಾ, ಬಾಂದ್ರ-ಕುರ್ಲಾ ಕಾಂಪ್ಲೆಕ್ಸ್, ಲೋಕಮಾನ್ಯ ತಿಲಕ್ ಟರ್ಮಿನಲ್, ಥಾಣೆ ಸಿಟಿಯ ಚಾಲಕರ ಲೈಸನ್ಸ್  ರದ್ದು ಪಡಿಸಲಾಗಿದೆ.