ಹಕ್ಕಿಗಳ ದಾಳಿ: ವಿಮಾನವನ್ನು ಸಮತಟ್ಟು ಪ್ರದೇಶದಲ್ಲಿ ಇಳಿಸಿ 233 ಪ್ರಯಾಣಿಕರನ್ನು ರಕ್ಷಿಸಿದ ಪೈಲಟ್

0
436

ಸನ್ಮಾರ್ಗ ವಾರ್ತೆ

ಮಾಸ್ಕೊ, ಆ. 16: ಹಕ್ಕಿಗಳು ಢಿಕ್ಕಿಯಾದ್ದರಿಂದ ವಿಮಾನವನ್ನು ತುರ್ತಾಗಿ ಪೈಲಟ್‍ ಒಬ್ಬರು ಭೂ ಸ್ಪರ್ಶ ಮಾಡಿದ್ದಾರೆ. ಈ ರೀತಿ ವಿಮಾನದಲ್ಲಿದ್ದ 233 ಮಂದಿಯನ್ನು ರಕ್ಷಿಸಿದರು. ಬಯಲಲ್ಲಿ ಇಳಿಸುವ ವೇಳೆ 23 ಪ್ರಯಾಣಿಕರು ಗಾಯಗೊಂಡಿದ್ದನ್ನು ಬಿಟ್ಟರೆ ಮತ್ಯಾವ ಅಪಾಯವೂ ಆಗಿಲ್ಲ. ಆದರೆ ಗಾಯಾಳುಗಳಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಂಟರ್ ಫಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯದ ಜನರು ಪೈಲಟ್‍ನ ಈ ಸಾಧನೆಗಾಗಿ ಪ್ರಶಂಸಿದ್ದಾರೆ. ಪೈಲಟ್ ದಾಮಿರ್ ಯುಸೂಪೋವ್‍ರನ್ನು ಹೀರೊ ಎಂದು ಮಾಧ್ಯಮಗಳು ಬಣ್ಣಿಸಿವೆ. ರಾಜಧಾನಿ ಮಾಸ್ಕೊ ಸಮೀಪದಲ್ಲಿ ಘಟನೆ ನಡೆದಿತ್ತು. ಉರಲ್ ಏರ್‌ಲೈನ್ಸ್‌ನ ಏರ್‍ವೇಸ್ 321 ಹಾರಾಟ ಆರಂಭಿಸಿದೊಡನೆ ಹಕ್ಕಿಗಳ ಗುಂಪು ಢಿಕ್ಕಿಯಾಗಿತ್ತು. ಇಂಜಿನ್‍ಗೆ ಹಾನಿಯಾಗಿದ್ದನ್ನು ಗಮನಿಸಿದ ಪೈಲಟ್ ತುರ್ತಾಗಿ ವಿಮಾನವನ್ನು ಭೂಸ್ಪರ್ಶ ಮಾಡಿಸಿದರು.