13 ವರ್ಷದ ಹಿಂದಿನ ನಾಯಿಕಚ್ಚಿದ ಕೇಸು; ಮಾಲಕನಿಗೆ 3 ತಿಂಗಳ ಸಜೆ

0
246

ಸನ್ಮಾರ್ಗ ವಾರ್ತೆ

ಮುಂಬಯಿ: ಸಾಕು ನಾಯಿ 72 ವರ್ಷದ ವ್ಯಕ್ತಿಗೆ ಕಚ್ಚಿದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟು ನಾಯಿ ಮಾಲಕನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2110 ಮೇ 30ರಂದು ವ್ಯಾಪಾರಿ ಸೈರಸ್ ಪರ್ಸಿ ಹೊರ್ಮುಸ್‍ಜಿ ಮತ್ತು ಅವರ ಸಂಬಂಧಿ ಕೊರ್ಸಿ ಇರಾನಿಯವರ ನಡುವೆ ಪರಸ್ಪರ ಮಾತಿನ ಜಗಳ ನಡೆದಿತ್ತು. ಕಾರಿನ ಬಳಿ ಇವರ ನಡುವೆ ಮಾತಿನ ಚಕಮಕಿ ನಡೆದಿತ್ತು . ಇವರ ಬಳಿ ಹೊರ್ಮುಸ್‍ಜಿಯ ಸಾಕು ನಾಯಿ ಇತ್ತು. ಇವರು ಜಗಳ ಮಾಡುವುದು ನೋಡಿದ ರೋಟ್ ವೇಲರ್ಕೊರ್ಸಿ ನಾಯಿ ಇರಾನಿಯವರ ಮೇಲೆ ದಾಳಿ ಮಾಡಿತ್ತು. ನಾಯಿ ಕಚ್ಚುತ್ತದೆಂದು ಗೊತ್ತಿದ್ದರಿಂದ ಹೊರ್ಮುಸ್‍ಜಿ ಅದನ್ನು ನಿಯಂತ್ರಿಸಬೇಕಿತ್ತು ಎಂದು ಕೋರ್ಟು ತೀರ್ಪಿನಲ್ಲಿ ಹೇಳಿದೆ. ಇಂತಹ ನಾಯಿಗಳನ್ನು ಸಾರ್ವಜನಿಕ ಸ್ಥಳಕ್ಕೆ ತರುವುದು ಇತರರ ಸುರಕ್ಷೆಗೆ ಅಪಾಯವಿದೆ ಆದ್ದರಿಂದ ಕೋರ್ಟು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.