ಝೆಲನ್ಸ್‍ಕಿಯವರನ್ನು ರಷ್ಯ ಕೊಲ್ಲದು: ಮಾಜಿ ಇಸ್ರೇಲ್ ಪ್ರಧಾನಿ ನಫ್ತಲಿ

0
240

ಸನ್ಮಾರ್ಗ ವಾರ್ತೆ

ಟೆಲ್‍ಅವಿವ್,ಫೆ.6: ಉಕ್ರೇನ್ ಅಧ್ಯಕ್ಷ ಝೆಲನ್ಸ್‍ಕಿಯವರನ್ನು ಹತ್ಯೆ ಮಾಡುವುದಿಲ್ಲ ಎಂದು ರಷ್ಯದ ಅಧ್ಯಕ್ಷ ವಾಲ್ದಿಮಿರ್ ಪುಟಿನ್ ತನಗೆ ಮಾತುಕೊಟ್ಟಿರುವುದಾಗಿ ಇಸ್ರೇಲಿನ ಮಾಜಿ ಪ್ರಧಾನಿ ನಫ್ತಲಿ ಬೆನಟ್ ಹೇಳಿದರು. ಅವರು ರಷ್ಯ ಉಕ್ರೇನ್ ಯುದ್ಧ ಶುರುವಾದ ಕಾಲದಿಂದ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಸುವ ಯತ್ನ ನಡೆಸುತ್ತಿದ್ದಾರೆ.

ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ನಫ್ತಲಿ ಬೆನೆಟ್ ಮಾಸ್ಕೊಗೆ ಬಂದಿದ್ದರು ಮತ್ತು ಅಧ್ಯಕ್ಷ ಪುಟಿನ್‍ರೊಡನೆ ಸಮಾಲೋಚಿಸಿದ್ದರು. ಆದರೆ ನಫ್ತಲಿಯವರ ಯತ್ನ ಪ್ರಯೋಜನವಾಗಿಲ್ಲ. ಪುಟಿನ್‍ರೊಂದಿಗೆ ಸಮಾಲೋಚಿಸಿದಾಗ ಝೆಲನ್ಸ್‍ಕಿಯವರ ಕುರಿತ ನಿಲುವನ್ನು ತಾನು ಕೇಳಿದೆ. ಅವರ ಹತ್ಯೆಗೆ ಯೋಜನೆ ಹಾಕಿರುವಿರಾ ಎಂದಾಗ ಅಂತಹ ಯೋಚನೆ ಇಲ್ಲ ಎಂದು ಪುಟಿನ್ ತಿಳಿಸಿದರೆಂದು ನಫ್ತಲಿ ತಿಳಿಸಿದರು.

ನಂತರ ಫೋನ್ ಮಾಡಿ ಈ ವಿಷಯವನ್ನು ಝೆಲನ್ಸ್‍ಕಿಗೆ ತಿಳಿಸಿದ್ದೇನೆ. ಆದರೆ ನನ್ನ ಹತ್ಯೆ ಮಾಡುವುದಿಲ್ಲ ಎಂದು ನಿಮಗೆ ನೂರಕ್ಕೆ ನೂರರಷ್ಟು ಖಾತ್ರಿ ಇದೆಯಾ ಎಂದು ಝೆಲನ್ಸ್‍ಕಿ ನನ್ನನ್ನು ಕೇಳಿದರು ಎಂದು ನಫ್ತಲಿ ಹೇಳಿದ್ದಾರೆ. ನ್ಯಾಟೊ ಸೇರುವುದರಿಂದ ಝೆಲನ್ಸ್‍ಕಿ ಹಿಂದೆ ಸರಿದರೆ ಉಕ್ರೇನ್ ಯುದ್ಧದಿಂದ ಹಿಂದೆ ಸರಿಯುವುದಾಗಿ ಪುಟಿನ್ ತಿಳಿಸಿದರು. ಇದೇ ವೇಳೆ ಬೆನೆಟ್ ನೆಫ್ತಲಿಯವರ ಹೇಳಿಕಗೆ ರಷ್ಯ ಮೌನವಾಗಿದೆ. ಆದರೆ ಪುಟಿನ್ ವಿದ್ಯಾವಂತ ಕಳ್ಳ. ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಉಕ್ರೇನ್ ವಿದೇಶ ಸಚಿವ ದಿಮಿತ್ರಿ ಕುಲೆಬ ಹೇಳಿದ್ದಾರೆ. ಇಸ್ರೇಲ್ ಕ್ರೇನ್ ಮತ್ತು ರಷ್ಯದೊಂದಿಗೆ ಇಸ್ರೇಲ್ ಉತ್ತಮ ಸಂಬಂಧ ಇರುವ ದೇಶವಾಗಿದೆ.