ಬಿಹಾರಕ್ಕೂ ಕೇಜ್ರಿವಾಲ್; ಪ್ರಶಾಂತ್ ಕಿಶೋರ್ ಸಾಥ್

0
1748

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 11 : ದಿಲ್ಲಿಯಲ್ಲಿ ಹ್ಯಾಟ್ರಿಕ್ ಗೆಲುವಿಗೆ ನಿಕಟವಾಗಿರುವ ಅರವಿಂದ್ ಕೇಜ್ರಿವಾಲ್‍ರ ಆಮ್ ಆದ್ಮಿ ಪಾರ್ಟಿ ತನ್ನನ್ನು ದೇಶದ ಬೇರೆಡೆಗೂ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹರಿಯಾಣ, ಪಂಜಾಬ್, ಗೋವಗಳಲ್ಲಿ ಕೇಜ್ರಿವಾಲ್ ಅದೃಷ್ಟ ಪರೀಕ್ಷಿಸಿ ನೋಡಿದ್ದಾರೆ. ದಿಲ್ಲಿಯ ಗೆಲುವಿನ ಬಳಿಕ ಚುನಾವಣೆ ಬಿಹಾರದಲ್ಲಿದ್ದು, ಜೆಡಿಯುನ ಮಾಜಿ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಈ ಸಲ ಆಮ್ ಆದ್ಮಿಗಾಗಿ ದಿಲ್ಲಿಯಲ್ಲಿ ಚುನಾವಣಾ ರಣತಂತ್ರ ರೂಪಿಸಿದ್ದರು. ಇದೇವೇಳೆ ಜೆಡಿಯುವಿನಿಂದ ಉಚ್ಚಾಟನೆಗೊಂಡಿರುವ ಪ್ರಭಾವಿ ನಾಯಕ ಪವನ್ ವರ್ಮ ಅರವಿಂದ್ ಕೇಜ್ರಿವಾಲ್‍ರನ್ನು ಅಭಿನಂದಿಸಿದ್ದಾರೆ.

ಬಿಹಾರದಲ್ಲಿ ಆಮ್ ಆದ್ಮಿಯ ನೇತೃತ್ವದಲ್ಲಿ ಹೊಸ ಸಖ್ಯ ರೂಪಿಸುವ ಸೂಚನೆ ಇದೆಂದು ಹೇಳಲಾಗುತ್ತಿದ್ದು, ಪವನ್ ವರ್ಮ ಕೇಜ್ರಿವಾಲ್‍ರ ಆಡಳಿತ ನೀತಿಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಆಮ್ ಆದ್ಮಿಯ ಆಡಳಿತ ನೀತಿಯನ್ನು ನಾನು ಗೌರವಿಸುವೆ. ಈವರೆಗೆ ನಡೆದ ಅವರ ಕೆಲಸಗಳಲ್ಲಿ ತನಗೆ ಸಂತೃಪ್ತಿಯಿದೆ. ರಾಜಕೀಯದ ಪ್ರತಿಯೊಂದೂ ತೀರ್ಮಾನಗಳನ್ನು ಹಂತ ಹಂತವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಈಗ ಇದಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿಲ್ಲ ಎಂದು ಪವನ್ ವರ್ಮ ಹೇಳಿದರು. ಭಾರತದ ಆತ್ಮವನ್ನು ಸಂರಕ್ಷಿಸಿದ ದಿಲ್ಲಿಯ ಜನರಿಗೆ ಕೃತಜ್ಞತೆಗಳು ಎಂದು ಪ್ರಶಾಂತ್ ಕಿಶೋರ್ ಆಮ್ ಆದ್ಮಿಯ ಗೆಲುವಿಗಾಗಿ ದಿಲ್ಲಿ ಮತದಾರರನ್ನು ಅಭಿನಂದಿಸಿದ್ದಾರೆ.