ಹಮಾಸ್ ವಿರುದ್ಧ ಇಸ್ರೇಲ್ ಅಖಾಡಕ್ಕೆ ಇಳಿಸಿದ್ದ ಅಬು ಶಬಾಬ್ ಹತ

0
759

ಸನ್ಮಾರ್ಗ ವಾರ್ತೆ

ಇಸ್ರೇಲಿನ ವಿರುದ್ಧ ಗಾಝಾದ ನಾಗರಿಕರು ಹೋರಾಡುತ್ತಿರುವಾಗ ಇಸ್ರೇಲ್ ಸೇನೆಗೆ ನೆರವಾಗುತ್ತಾ ಹಮಾಸ್ ವಿರುದ್ಧ ಹೋರಾಟಕ್ಕೆ ಇಳಿದಿದ್ದ ಅಬು ಶಬಾಬ್ ತಂಡದ ಮುಖಂಡ ಯಾಸರ್ ಅಬು ಶಬಾಬ್ ಹತ್ಯೆಗಿಡಾಗಿದ್ದಾನೆ. ಆತನದೇ ಗ್ಯಾಂಗ್ ನ ಸದಸ್ಯರು ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಗ್ಯಾಂಗ್ ನ ಎರಡು ಗುಂಪುಗಳ ನಡುವೆ ನಡೆದ ಹೋರಾಟದಲ್ಲಿ ಈ ಹತ್ಯೆ ನಡೆದಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.

ಹಮಾಸ್ ಗೆ ವಿರುದ್ಧವಾಗಿ ಈತನ ನೇತೃತ್ವದಲ್ಲಿ ಪಾಪ್ಯುಲರ್ ಫೋರ್ಸ್ ಗ್ರೂಪ್ ಎಂಬ ಸಶಸ್ತ್ರ ಗುಂಪನ್ನು ಇಸ್ರೇಲ್ ಸೇನೆ ರೂಪಿಸಿತ್ತು.

ಈತ ಪಶ್ಚಿಮ ಗಾಜಾದ ಬದವಿ ಬುಡಕಟ್ಟಿಗೆ ಸೇರಿದವನಾಗಿದ್ದಾನೆ. ಫೆಲೆಸ್ತೀನಿಗಳ ಪ್ರಕಾರ ಈತ ಓರ್ವ ಅಪರಾಧಿಯಾಗಿದ್ದ. ಆದರೆ ಈತನನ್ನೇ ಇಸ್ರೇಲ್ ಬಳಸಿಕೊಂಡು ಹಮಾಸಿಗೆ ವಿರುದ್ಧವಾದ ಸೇನೆಯನ್ನು ಕಟ್ಟಿ, ಅದರ ನಾಯಕನನ್ನಾಗಿ ಮಾಡಿತು. ಇದಕ್ಕಿಂತ ಮೊದಲು ಡ್ರಗ್ಸ್ ಮಾರಾಟ ಮತ್ತು ಇನ್ನಿತರ ಪ್ರಕರಣಗಳಲ್ಲಿ ಜೈಲು ಸೇರಿದ್ದ. ಈತನಿಗೆ ಫೆಲಿಸ್ತೀನಿಯರಿಂದ ಯಾವ ಬೆಂಬಲವೂ ಸಿಕ್ಕಿರಲಿಲ್ಲ. ಯಾವಾಗ ಈತನನ್ನು ಇಸ್ರೇಲ್ ಸೇನೆ ಪಾಪ್ಯುಲರ್ ಫೋರ್ಸ್ ಎಂಬ ಗುಂಪಿಗೆ ನಾಯಕನನ್ನಾಗಿ ಮಾಡಿದೆ ಅನ್ನುವುದು ಗೊತ್ತಾಯಿತೋ ಈತನ ಬುಡಕಟ್ಟು ಕೂಡ ಈತನನ್ನು ಹೊರ ಹಾಕಿತು. ಇದೀಗ ಆತ ತನ್ನದೇ ಗುಂಪಿನ ಆಂತರಿಕ ಘರ್ಷಣೆಗೆ ಹತನಾಗಿದ್ದಾನೆ.