ಸೆರೆ ಸಿಕ್ಕ ಶ್ರೀಮಂತ ಭಿಕ್ಷುಕಿ!

0
36

ಸನ್ಮಾರ್ಗ ವಾರ್ತೆ

ಅಬುಧಾಬಿ: ಐಷಾರಾಮಿ ಕಾರಿನಲ್ಲಿ ಬಂದು ಭಿಕ್ಷೆ ಬೇಡುತ್ತಿದ್ದ ಯುವತಿಯನ್ನು ಅಬುದಾಭಿ ಪೊಲೀಸರು ಬಂಧಿಸಿದ್ದಾರೆ. 2022 ನವಂಬರ್ ಆರು ಮತ್ತು ಡಿಸೆಂಬರ್ 12ರ ನಡುವೆ 159 ಭಿಕ್ಷುಕರನ್ನು ಬಂಧಿಸಲಾಗಿದ್ದು ಅವರಲ್ಲಿ ಈ ಶ್ರೀಮಂತ ಯಾಚಕಿಯೂ ಸೇರಿದ್ದಾಳೆ.

ನಗರದ ಮಸೀದಿಗಳ ಮುಂದೆ ಈ ಶ್ರೀಮಂತೆ ಭಿಕ್ಷೆ ಬಿಡುತ್ತಿದ್ದಳು. ಮಸೀದಿಯ ಒಂದಷ್ಟು ದೂರದಲ್ಲಿ ಕಾರನ್ನು ನಿಲ್ಲಿಸಿ ನಡಕೊಂಡು ಈಕೆ ಮಸೀದಿಗೆ ಬರುತ್ತಿದ್ದಳು. ಭಿಕ್ಷಾಟನೆಯಿಂದ ಈಕೆ ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲೂ ಐಶಾರಾಮಿ ಕಾರುಗಳಲ್ಲೇ ಅತ್ಯಾಧುನಿಕ ಕಾರನ್ನು ಈಕೆ ಉಪಯೋಗಿಸುತ್ತಿದ್ದಳು. ಈಕೆಗೆ 5000 ದಿರ್ಹಮ್ ದಂಡ ಮತ್ತು 3 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಸಂಘಟಿತ ಭಿಕ್ಷಾಟನೆಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 1ಲಕ್ಷ ದಿರ್ಹಮ್ ದಂಡವನ್ನು ಅಬುಧಾಬಿಯಲ್ಲಿ ವಿಧಿಸಲಾಗುತ್ತದೆ.

LEAVE A REPLY

Please enter your comment!
Please enter your name here