ದಿಲ್ಲಿಯಲ್ಲಿ ಭೂಕಂಪನ; 5.4 ತೀವ್ರತೆ!

0
193

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.24: ದಿಲ್ಲಿ ಸಮೀಪದ ಪ್ರದೇಶಗಳಲ್ಲಿ ತೀವ್ರ ಸ್ವರೂಪದ ಭೂಕಂಪನ ಸಂಭವಿಸಿದ್ದು ಭೂಕಂಪನದ ತೀವ್ರತೆ 5.4 ರಷ್ಟಿತ್ತೆಂದು ದಾಖಲಾಗಿದೆ. ನೇಪಾಳ ಭೂಕಂಪನದ ಕೇಂದ್ರ ಬಿಂದು ಆಗಿತ್ತು. ಮಂಗಳವಾರ ಮಧ್ಯಾಹ್ನ 2:30ಕ್ಕೆ ಭೂಕಂಪಿಸಿತು. ಕಂಪನದ ಅವಧಿ 30 ಸೆಕಂಡಿನವರೆಗಿತ್ತು.

ನೇಪಾಳ, ಭಾರತ, ಚೀನಗಳಲ್ಲಿಯೂ ಭೂಕಂಪನ ಅನುಭವಕ್ಕೆ ಬಂದಿದೆ. ನೇಪಾಳದ ಕಲಿಕ ಎಂಬಲ್ಲಿ ಭೂಮಿ ಕಂಪಿಸಲು ಆರಂಭವಾಯಿತು. ಮನೆಗಳ ಸೀಲಿಂಗ್ ಫ್ಯಾನ್‍ಗಳು , ಮನೆಯ ಉಪಕರಣಗಳು ಕಂಪಿಸಿದ ದೃಶ್ಯಗಳನ್ನು ಜನರು ಸೆರೆ ಹಿಡಿದು ಶೇರ್ ಮಾಡಿದರು. ಜನವರಿ ಐದರಂದು ಕೂಡಾ 5.8 ತೀವ್ರತೆಯ ಕಂಪನ ದಿಲ್ಲಿಯಲ್ಲಿ ಆಗಿತ್ತು ಎಂದು ವರದಿ ತಿಳಿಸಿದೆ