‘ಇಂಡ್ಯಾ ದಿ ಮೋದಿ ಕ್ವೆಶ್ಚನ್’ ಪ್ರಥಮ ಭಾಗ ಕೇರಳ ರಾಜ್ಯದಾದ್ಯಂತ ಗಣರಾಜ್ಯೋತ್ಸವ ದಿನದಂದು ಪ್ರದರ್ಶನ: ಕಾಂಗ್ರೆಸ್‌

0
216

ಸನ್ಮಾರ್ಗ ವಾರ್ತೆ

ತಿರುವನಂತಪುರ: ಗುಜರಾತ್ ಗಲಭೆಗೆ ಸಂಬಂಧಿಸಿ ಬಿಬಿಸಿ ತಯಾರಿಸಿದ ಸಾಕ್ಷ್ಯ ಚಿತ್ರ “ಇಂಡ್ಯಾ ದಿ ಮೋದಿ ಕ್ವೆಶ್ಚನ್’ ಇದರ ಪ್ರಥಮ ಭಾಗವನ್ನು ಕೇರಳ ರಾಜ್ಯದಾದ್ಯಂತ ಗಣರಾಜ್ಯೋತ್ಸವ ದಿನದಂದು ಪ್ರದರ್ಶಿಸುವುದಾಗಿ ಕಾಂಗ್ರೆಸ್‌ನ ಕೇರಳದ ಅಲ್ಪ ಸಂಖ್ಯಾತ ಘಟಕ ಹೇಳಿದೆ.

ಈಗಾಗಲೇ ಕೆಲ ಶಿಕ್ಷಣ ಸಂಸ್ಥೆಗಳ ಮೈದಾನಗಳಲ್ಲಿ ಈ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸುವುದಾಗಿ ಎಸ್.ಎಫ್.ಐ. ಹಾಗೂ ಡಿವೈಎಫ್‌ಐ ಹೇಳಿದ್ದನ್ನು ಸ್ಮರಿಸಬಹುದು. ಇದೇ ವೇಳೆ ಸಾಕ್ಷ್ಯ ಚಿತ್ರದ ಎರಡನೇ ಭಾಗವನ್ನು ಬಿಬಿಸಿ ಇಂದು ಯು.ಕೆ.ಯಲ್ಲಿ ಪ್ರಸಾರ ಮಾಡಲಿದೆ