ಕೇರಳ: ಪೊಂಬಿಲೈ ಒರುಮೈ ನಾಯಕಿ ಗೋಮತಿ ವೆಲ್ಫೇರ್ ಪಾರ್ಟಿಗೆ ಸೇರ್ಪಡೆ

0
556

ಸನ್ಮಾರ್ಗ ವಾರ್ತೆ

ಆಲುವ(ಕೇರಳ): ಕೇರಳದ ಭೂರಹಿತರ ಪರವಾಗಿ,ಆದಿವಾಸಿಗಳ ಪರವಾಗಿ ಹೋರಾಟದ ಮುಂಚೂಣಿಯಲ್ಲಿದ್ದ ಮುನ್ನಾರಿನ ಪೊಂಬಿಲೈ ಒರುಮೈ ನಾಯಕಿ ಗೋಮತಿಯವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆಲುವ ವಿಧಾನಸಭಾ ಕ್ಷೇತ್ರದ ವೆಲ್ಫೇರ್ ಪಾರ್ಟಿ ಪ್ರಚಾರ ಸಭೆಯಲ್ಲಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ. ವೆಲ್ಫೇರ್ ಪಾರ್ಟಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎ. ಶಫೀಕ್ ಸದಸ್ಯತ್ವ ನೀಡಿದರು.

ತೋಟ್ಟಂ ನ ಕಾರ್ಮಿಕರ ಹಕ್ಕಿಗಾಗಿ ಪೊಂಬಿಲೈ ಒರುಮೈ ನೇತೃತ್ದಲ್ಲಿ ಮುನ್ನಾರಿನಲ್ಲಿ ನಡೆದ ಹೋರಾಟದಲ್ಲಿ ಗೋಮತಿಯವರು ಕೇಂದ್ರ ಬಿಂದುವಾಗಿದ್ದರು. ಪರಂಪರಾಗತ ಕಾರ್ಮಿಕ ಯೂನಿಯನ್‍ಗಳಿಗೆ ಸವಾಲು ಹಾಕಿ ತೋಟ ಕಾರ್ಮಿಕರಾದ ಮಹಿಳೆಯರು ಮಾಡಿದ ಪೊಂಬಿಲೈ ಒರುಮೈ ಹೋರಾಟದಲ್ಲಿ ಗೋಮತಿ ಇಡೀ ದೇಶದ ಗಮನ ಸೆಳೆದಿದ್ದರು.

2015ರಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಬ್ಲಾಕ್ ಪಂಚಾಯತ್‍ಗೆ ನಲ್ಲತಣ್ಣಿ ವಿಭಾಗದಿಂದ ಪೊಂಬಿಲೈ ಒರುಮೈ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೋಮತಿ ಗೆದ್ದಿದ್ದರು. ಮೌಲ್ಯಾಧಾರಿತ ರಾಜಕೀಯ ಪಕ್ಷವಾಗಿ ಕೆಲಸ ಮಾಡುತ್ತಿರುವ ವೆಲ್ಫೇರ್ ಪಾರ್ಟಿಗೆ ಗೋಮತಿ ಸೇರ್ಪಡೆಯಾಗಿರುವುದು ಖುಷಿ ತಂದಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.