ಸನ್ಮಾರ್ಗ ವಾರ್ತೆ
ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸರಕಾರ ರಚಿಸುವ ಕನಸು ಕಾಣುತ್ತಿರುವ ಬಿಜೆಪಿ ಸಿನೆಮಾ-ಕ್ರೀಡಾ ಕ್ಷೇತ್ರದ ಪ್ರಮುಖ ತಾರೆಯರನ್ನು ಪಾರ್ಟಿಗೆ ಸೇರಿಸುವ ಕೆಲಸ ಮುಂದುವರಿಸಿದೆ. ಈ ಸಾಲಿನಲ್ಲಿ ಮಿಥುನ್ ಚಕ್ರವರ್ತಿಯವರ ಹೆಸರು ಕೇಳಿ ಬರುತ್ತಿದ್ದು ಕೊಲ್ಕತಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಧಾನಿಯ ರ್ಯಾಲಿ ಕೊಲ್ಕತಾದ ಬ್ರಿಗೇಡ್ ಪರೇಡ್ ಗ್ರೌಂಡ್ನಲ್ಲಿ ನಡೆಯಲಿದೆ.
ಜನಪ್ರಿಯ ಬಂಗಾಳಿ ನಟ ಯಶ್ದೀಪ್ ಗುಪ್ತಾ, ಪಾಪಿಯ ಅಧಿಕಾರಿ ಸಹಿ ಅರ್ಧಾಂಶ ನಟ ನಟಿಯರು ಕಳೆದ ಕೆಲವು ದಿವಸಗಳಿಂದ ಬಿಜೆಪಿಯ ಪಾಳಯ ಸೇರಿದ್ದಾರೆ.
ಈ ಹಿಂದೆ ಮಿಥುನ್ ಚಕ್ರವರ್ತಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ರಿಗೆ ಮುಂಬೈಯ ಬಂಗಲೆಯಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಆಗಲೇ ಮಿಥುನ್ ಸಂಘಪರಿವಾರಕ್ಕೆ ನಿಕಟವಾದ ಸುದ್ದಿ ಹರಿದಾಡುತ್ತಿತ್ತು. ಮಿಥುನ್ಗೆ 70 ವರ್ಷ ಆಗಿದ್ದು 2019ರಲ್ಲಿ ಅವರು ನಾಗಪುರದ ಆರೆಸ್ಸೆಸ್ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಬಿಜೆಪಿಗೆ ಸೇರ್ಪಡೆಯಾಗುವ ವಿಷಯವನ್ನು ಅವರು ಒಪ್ಪವುದಿಲ್ಲ. ಆದರೆ ಮೋದಿಯ ಉಪಸ್ಥಿತಿಯಲ್ಲಿ ಅವರು ಬಿಜೆಪಿಯೊಳಗೆ ಸೇರಿಕೊಳ್ಳುತ್ತಾರೆ ಎನ್ನುವ ಬಲವಾದ ವದಂತಿ ಬಂಗಾಳಾದ್ಯಂತ ಹರಡಿದೆ. ಶಾರದ ಗ್ರೂಪಿನ ಬ್ರಾಂಡ್ ಅಂಬಾಸಡರ್ ಆಗಿದ್ದ ಮಿಥುನ್ಗೆ ಸಿಕ್ಕಿದ್ದ 1.2 ಕೋಟಿ ರೂ. ಸಂಭಾವನೆಯನ್ನು ಅವರು ಎನ್ಫೋರ್ಸ್ಮೆಂಟ್ ಡೈರಕ್ಟರೇಟಿಗೆ ಮರಳಿಸಿದ್ದರು. ವಿವಿಧ ಭಾಷೆಗಳಲ್ಲಿ ಮಿಥುನ್ 350 ಚಿತ್ರಗಳಲ್ಲಿ ನಟಿಸಿದ್ದಾರೆ. 1976 ಮತ್ತು 1996ರಲ್ಲಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು.












